LATEST NEWS
ವೆಂಕಟರಮಣ ಶಾರದಾ ಮಹೋತ್ಸವಕ್ಕೆ ತೆರೆ

ವೆಂಕಟರಮಣ ಶಾರದಾ ಮಹೋತ್ಸವಕ್ಕೆ ತೆರೆ
ಮಂಗಳೂರು ಅಕ್ಟೋಬರ್ 1 : ವೆಂಕಟರಮಣ ದೇವಸ್ಥಾನದ 95ನೇ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವಕ್ಕೆ ತೆರೆ ಬಿದ್ದಿದೆ. ಇಂದು ಶಾರದಾ ಮಾತೆಯ ವಿಜೃಂಭಣೆಯ ಶೋಭಾಯಾತ್ರೆ ನಡೆಯಿತು. ಶಾರದಾ ಮಾತೆಯ ಪೂಜೆಯ ನಂತರ ಅಲಂಕೃತವಾದ ಮಂಟಪದಲ್ಲಿ ದೇವಿಯ ಮೂರ್ತಿಯ ಶೋಭಾಯತ್ರೆ ನಡೆಯಿತು.
ಈ ಶೋಭಾಯಾತ್ರೆಯಲ್ಲಿ 10ಕ್ಕೂ ಅಧಿಕ ಟ್ಯಾಬ್ಲೋಗಳು ಹಾಗೂ ಹುಲಿ ವೇಷಧಾರಿಗಳು ಪಾಲ್ಗೊಂಡಿದ್ದವು. ದೇವಿಯ ಮೂರ್ತಿಯ ಶೋಭಾಯಾತ್ರೆ ಮೆರವಣಿಗೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು. ನಂತರ ದೇವಿಯ ಮೂರ್ತಿಯನ್ನು ಮಹಮ್ಮಾಯಿ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.
