LATEST NEWS
ಶಕುಂತಲಾ ಕೊಲೆ ಪ್ರಕರಣ ಆರೋಪಿಗಳಿಗೆ ಜೀವಾಧಿ ಶಿಕ್ಷೆ
ಉಡುಪಿ ಸೆಪ್ಟೆಂಬರ್ 8: ಉಡುಪಿಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐದು ವರ್ಷಗಳ ಹಿಂದೆ ನಡೆದಿದ್ದ ಶಕುಂತಳಾ ಎಂಬವರ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿದೆ. ಉಪ್ಪೂರಿನ ಕೆ.ಜಿ ರೋಡ್ ನಿವಾಸಿ ಹರೀಶ್ ಪೂಜಾರಿ ಮತ್ತು ಆತನ ಗೆಳೆಯ ಹೇರೂರಿನ ಸಂತೋಷ್ ಪೂಜಾರಿ ಎಂಬವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ .
ಕೊಲೆ ಹಿನ್ನಲೆ
ಸಾಲ ಮಾಡಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ಆರೋಪಿಗಳ ಹರೀಶ್ ಪೂಜಾರಿ ಹಾಗೂ ಸಂತೋಷ್ ಪೂಜಾರಿ ಹಣ ಹೊಂದಿಸಲು ಸುಲಿಗೆ ಮಾಡುವ ಪ್ಲಾನ್ ಮಾಡಿದ್ದರು ಎಂದು ಹೇಳಲಾಗಿದೆ . ಈ ಹಿನ್ನೆಲೆಯಲ್ಲಿ 2012 ಜೂನ್ 25 ರಂದು ಆರೋಪಿ ಹರೀಶ್ ಪೂಜಾರಿ ತನ್ನ ಸಂಬಂಧಿ ಶಕುಂತಳಾ ಪೂಜಾರಿ ಅವರ ಮನೆಗೆ ತೆರಳಿದ್ದರು. ಮುಂಬೈಯಲ್ಲಿರುವ ಶಕುಂತಲಾ ಪೂಜಾರಿಯವರ ಸಹೋದರಿಯ ದೂರವಾಣಿ ಸಂಖ್ಯೆ ಪಡೆಯುವ ನೆಪದಲ್ಲಿ ಮನೆ ಪ್ರವೇಶಿಸಿದ್ದರು ಈ ಸಂದರ್ಭದಲ್ಲಿ ಸಂತೋಷ್ ಪೂಜಾರಿ ಕೂಡ ಇದ್ದ. ಇಬ್ಬರು ಶಕುಂತಲಾ ಪೂಜಾರಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಮನೆಯಲ್ಲಿದ್ದ ಕರಿಮಣಿ ಸರ ,ಬೆಂಡೋಲೆ ,ಚಿನ್ನದ ಸರ ಸೇರಿದ ಇನ್ನಿತರ ವಸ್ತುಗಳಿಂದ ದೋಚಿ ಪರಾರಿಯಾಗಿದ್ದರು .
ಈ ಪ್ರಕರಣದ ಕುರಿತು ತನಿಖೆ ನಡೆಸಿದ ಮಲ್ಪೆ ಪೊಲೀಸರು ಆರೋಪಿಗಳಾದ ಸಂತೋಷ್ ಪೂಜಾರಿ ಹಾಗೂ ಹರೀಶ್ ಪೂಜಾರಿಯನ್ನು ಬಂಧಿಸಿದ್ದರು .ಈ ಪ್ರಕರಣದ ವಿಚಾರಣೆ ನಡೆಸಿದ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿದೆ . ಅದಲ್ಲದೆ ತಲಾ 20 ಸಾವಿರ ರೂಪಾಯಿ ದಂಡ ಹಾಗೂ ಕಲಾಂ 357ಸಿಆರ್ ಪಿಸಿ ಅಡಿಯಲ್ಲಿ ತಲಾ 25 ಸಾವಿರ ರೂಪಾಯಿಯನ್ನು ಶಕುಂತಲಾ ರ ಮಕ್ಕಳಿಗೆ ಪರಿಹಾರ ಧನವಾಗಿ ನೀಡುವಂತೆ ಆದೇಶಿಸಿ ತೀರ್ಪು ನೀಡಿದೆ .