LATEST NEWS
ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ – ಶಕುಂತಲಾ ಶೆಟ್ಟಿ

ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ – ಶಕುಂತಲಾ ಶೆಟ್ಟಿ
ಮಂಗಳೂರು ಮೇ 17: ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ತಿಳಿಸಿದ್ದಾರೆ.
ಪುತ್ತೂರಿನಲ್ಲಿ ನಡೆದ ಕಾಂಗ್ರೇಸ್ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ನಾನು ಇದುವರೆಗೆ ನಾಲ್ಕು ಬಾರಿ ಸೋತಿದ್ದೇನೆ. ಆದ್ದರಿಂದ ಈ ಬಾರಿಯ ಸೋಲಿನಿಂದ ತಾನು ಕಂಗೆಟ್ಟಿಲ್ಲ ಎಂದು ಹೇಳಿದರು. ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೆನೆ ಎಂದು ಹೇಳಿದ ಅವರು ಮುಂದೆ ಯಾವ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದರು.

ಪುತ್ತೂರಿನ ಪ್ರತಿ ಗ್ರಾಮಕ್ಕೂ ಭೇಟಿ ನೀಡುತ್ತೇನೆ ಎಂದು ಹೇಳಿದ ಅವರು, ಸದ್ಯದಲ್ಲೇ ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶ ಮಾಡಲಾಗುವುದು ಎಂದರು. ಮುಂದಿನ ಬಾರಿ ವಿಧಾನಸಭೆ ಚುನವಾಣೆಗೆ ಹೊಸ ಸಮರ್ಥ ಅಭ್ಯರ್ಥಿಯನ್ನು ಹುಡುಕಿ ಒಗ್ಗಟ್ಟಿನಿಂದ ಗೆಲ್ಲಿಸುತ್ತೇವೆ ಎಂದು ಹೇಳಿದರು.
ಗೆಲುವಿನ ಉತ್ಸಾಹದಲ್ಲಿ ಬಿಜೆಪಿ ಕಾರ್ಯಕರ್ತರು ಯಾರೋ ಪಾಪದವರ ಮನೆ ಮುಂದೆ ಪಟಾಕಿ ಸಿಡಿಸುವುದು, ಬಾಟಲಿ ಎಸೆಯುವುದು ಮಾಡುತ್ತಿದ್ದಾರೆ ಎಂದು ಆರೋಪಿಸಿದ ಶಕುಂತಲಾ ಶೆಟ್ಟಿ ಇದರ ವಿರುದ್ದ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.