Connect with us

LATEST NEWS

ಕೇರಳ ಸರಕಾರಕ್ಕೆ ತಟ್ಟಿದ ಶಬರಿಮಲೆ ವಿವಾದ – ದೇವಸ್ಥಾನದ ಆದಾಯದಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತ

ಕೇರಳ ಸರಕಾರಕ್ಕೆ ತಟ್ಟಿದ ಶಬರಿಮಲೆ ವಿವಾದ – ದೇವಸ್ಥಾನದ ಆದಾಯದಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತ

ಕೇರಳ ಅಕ್ಟೋಬರ್ 23: ಎಲ್ಲಾ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಿದ ಸುಪ್ರೀಂಕೋರ್ಟ್ ಆದೇಶದ ನಂತರ ಶಬರಿಮಲೆಯ ಆದಾಯದಲ್ಲಿ ತೀವ್ರ ಕುಸಿತ ಕಂಡು ಬಂದಿದೆ.

ಸುಪ್ರೀಂಕೋರ್ಟ್ ಆದೇಶವನ್ನು ತಮ್ಮ ಪ್ರಚಾರಕ್ಕಾಗಿ ಬಳಸಿಕೊಂಡ ಸಾಮಾಜಿಕ ಕಾರ್ಯಕರ್ತೆಯರು ಶಬರಿಮಲೆ ಪ್ರವೇಶಕ್ಕೆ ವಿಫಲ ಪ್ರಯತ್ನ ನಡೆಸಿದ್ದರು. ಇದು ಅಯ್ಯಪ್ಪ ಭಕ್ತರ ಆಕ್ರೋಶಕ್ಕೆ ಕಾರಣವಾಗಿ ಭಾರಿ ಪ್ರಮಾಣದ ಪ್ರತಿಭಟನೆಯನ್ನು ಎದುರಿಸಬೇಕಾಗಿತ್ತು.
ಇದೆಲ್ಲಾ ಸಮಸ್ಯೆಗಳಿಂದಾಗಿ ಈ ಬಾರಿ ಶಬರಿಮಲೆ ದೇವಸ್ಥಾನದ ತೆರೆದ ಅವಧಿಯಲ್ಲಿ ದೇವಸ್ಥಾನದ ಆದಾಯದಲ್ಲಿ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಹೇಳಲಾಗಿದೆ.

ತುಲಾ ಅವಧಿಯಲ್ಲಿ ಪ್ರತಿದಿನ 8 ರಿಂದ 10 ಲಕ್ಷ ರೂಪಾಯಿ ವರೆಗೆ ಆರವಣ ಪಾಯಸ, ಮತ್ತು ಅಪ್ಪ ಪ್ರಸಾದ ಮಾರಾಟವಾಗುತ್ತಿತ್ತು. ಆದರೆ ವಿವಾದ ಪ್ರತಿಭಟನೆ ಕಾರಣ ಇದು 1.40 ಲಕ್ಷಕ್ಕೆ ಕುಸಿದಿದೆ. ಅಲ್ಲದೆ ದೇವಸ್ಥಾನದ ಹುಂಡಿಯ ಕಾಣಿಕೆ ಕೂಡ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಹೇಳಲಾಗಿದೆ.

ದೇವಸ್ಥಾನದ ಆಚಾರ ವಿಚಾರದಲ್ಲಿ ಕೇರಳ ಸರಕಾರ ನಡೆದುಕೊಂಡ ರೀತಿಗೆ ಅಯ್ಯಪ್ಪ ಭಕ್ತರು ಕೋಪಿಸಿಕೊಂಡಿದ್ದು ಇದಕ್ಕೆ ಕಾರಣ ಎಂದು ಹೇಳಲಾಗಿದ್ದು, ಇನ್ನೊಂದೆಡೆ ದೇವಾಲಯದ ಆಚಾರ ವಿಚಾರ ಅನುಷ್ಠಾನದ ಬಗ್ಗೆ ಸರಕಾರಕ್ಕೆ ನಂಬಿಕೆ ಇಲ್ಲದಿದ್ದರೆ, ಭಕ್ತರು ಕಾಣಿಕೆ ಬದಲು ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಬರೆದು ಹುಂಡಿಗೆ ಹಾಕುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ.

ಕೇರಳ ಸರಕಾರ ಶಬರಿಮಲೆ ವಿಷಯದಲ್ಲಿ ನಡೆದುಕೊಂಡ ರೀತಿ ಈಗ ಕೇರಳ ಸರಕಾರಕ್ಕೆ ತಿರುಗಿ ಬಿದ್ದಿದೆ. ಕೇರಳದ ಪ್ರಮುಖ ಆದಾಯದ ಮೂಲವಾಗಿದ್ದ ಶಬರಿಮಲೆಯಲ್ಲಿ ಇಳಿಮುಖ ಆಗಿರುವ ಆದಾಯ ಕೇರಳವನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದೇ ರೀತಿ ಮುಂದುವರೆದರೆ ಈ ಬಾರಿ ಕೇರಳ ಸರಕಾರಕ್ಕೆ ತನ್ನ ಸರಕಾರಿ ನೌಕರರಿಗೆ ಸಂಬಳ ನೀಡಲು ಸಾಧ್ಯವಾಗದ ಆರ್ಥಿಕ ಸಂಕಷ್ಟ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *