LATEST NEWS
SFI ನಾಯಕಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ : ಒರ್ವ ಆರೋಪಿ ಬಂಧನ

SFI ನಾಯಕಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ : ಒರ್ವ ಆರೋಪಿ ಬಂಧನ
ಮಂಗಳೂರು, ಜನವರಿ 14 :ಮಂಗಳೂರಿನ SFI ನಾಯಕಿಗೆ ಸಾಮಾಜಿಕ ಜಾಲ ತಾಣಗಳ ಮೂಲಕ ಬೆದರಿಕೆ ಹಾಕಿದ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ.

ಆರೋಪಿ ಹರೀಶ್
ನಗರದ ಎಸ್‌ಎಫ್‌ಐ ನಾಯಕಿ ಹಾಗೂಸಾಮಾಜಿಕ ಹೋರಾಟಗಾರ್ತಿ ಮಾಧುರಿ ಬೋಳಾರ ಅವರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕಿರುಕುಳ, ಬೆದರಿಕೆ ಹಾಕಿದ ಆರೋಪಿ ಹರೀಶ್ ದೇವಾಡಿಗ ಅವರನ್ನು ಪಾಂಡೇಶ್ವರ ಪೋಲಿಸರು ಬಂಧಿಸಿದ್ದಾರೆ.

ಪಾಂಡೇಶ್ವರ ಠಾಣಾ ಪೊಲೀಸರು ಇಲ್ಲಿನ ಪಂಪ್ ವೆಲ್ ಬಳಿ ಶ್ರೀಹರಿ ಅಲಿಯಾಸ್ ಹರೀಶ್ ದೇವಾಡಿಗ ಅಲಿಯಾಸ್ ಕಕ್ಕಿಂಜೆ ಹರೀಶ್ ನನ್ನು ಬಂಧಿಸಿದ್ದಾರೆ.
ಶ್ರೀಹರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕು ಕಕ್ಕಿಂಜೆ ಬಳಿಯ ತೋಟತಾಡಿ ಗ್ರಾಮದ ಬೈಲಂಗಡಿ ಗಾಂದೋಟ್ಯ ಮನೆ ನಿವಾಸಿ.
ಬಂಧಿತ ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

SFI ನಾಯಕಿ ಮಾಧುರಿ ಬೋಳಾರ್
ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲ ಆರೋಪಿಗಳನ್ನು ಬಂಧಿಸಬೇಕಾಗಿದೆ.
SFI ನಾಯಕಿ ಮಾಧುರಿ ಬೋಳಾರ ಹಾಗೂ ಇತರರು ಸಂಘಟನೆಯ ಕೆಲಸದ ನಿಮಿತ್ತ ಹೋಗುವಾಗ ಜೊತೆಯಾಗಿ ತೆಗೆದಿರುವ ಭಾವಚಿತ್ರವನ್ನು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ್ದರು.
ಈ ಭಾವಚಿತ್ರವನ್ನು ಕೆಲವರು ಪೇಸ್‌ಬುಕ್ ನಿಂದ ಡೌನ್‌ಲೋಡ್ ಮಾಡಿ, ಈ ಚಿತ್ರದ ಜತೆಗೆ ಬೆದರಿಕೆ ಸಂದೇಶಗಳನ್ನು ಹಾಕಿದ್ದರು.
ಈ ಬಗ್ಗೆ ಎಸ್‌ಎಫ್‌ಐ ಸಂಘಟನೆಯ ಜಿಲ್ಲಾ ಕಾರ್ಯದರ್ಶಿಯೂ ಆಗಿರುವ ಮಾಧುರಿ ಪಾಂಡೇಶ್ವರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.