LATEST NEWS
ಮನೆಯವರು ಮಲಗಿದ ಮೇಲೆ ಅಪ್ರಾಪ್ತ ಬಾಲಕಿಯ ಮೇಲೆ ಇನ್ಸ್ಟಾಗ್ರಾಂ ಫ್ರೆಂಡ್ ನಿಂದ ಲೈಂಗಿಕ ದೌರ್ಜನ್ಯ….!!

ಮಂಗಳೂರು ಸೆಪ್ಟೆಂಬರ್ 04 : ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಬಾಲಕನೊಬ್ಬ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಕುರಿತಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
10ನೇ ತರಗತಿ ವಿಧ್ಯಾರ್ಥಿನಿಯೊಬ್ಬಳಿಗೆ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂ ಮೂಲಕ ಬಾಲಕನೊಬ್ಬನ (17 ವರ್ಷ) ಪರಿಚಯವಾಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದ್ದು, ಬಾಲಕ ರಾತ್ರಿ ವೇಳೆ ಬಾಲಕಿಯ ಮನೆಗೆ ಆಗಮಿಸಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ದೂರು ದಾಖಲಾಗಿದೆ.

ಬಾಲಕ ಅಗಸ್ಟ್ 13 ರಂದು ರಾತ್ರಿ ಬಾಲಕಿಗೆ ಸಂದೇಶ ಕಳುಹಿಸಿ ನಾನು ಮನೆಗೆ ಬರುತ್ತಿದ್ದೇನೆ ನೀನು ಬಾಗಿಲು ತೆಗೆಯಬೇಕು. ಇಲ್ಲದಿದ್ದರೆ ಮನೆಯವರ ಮುಂದೆ ಗಲಾಟೆ ಮಾಡುತ್ತೇನೆ’ ಎಂದು ಹೆದರಿಸಿದ್ದ. ಅಂದು ಎಲ್ಲರೂ ಮಲಗಿದ ನಂತರ ರಾತ್ರಿ 12ರ ವೇಳೆ ಆಕೆಯ ಮನೆಗೆ ಬಂದಿದ್ದ. ಬಾಲಕಿ ಮೇಲೆ ಬಲವಂತದಿಂದ ನಾಲ್ಕೈದು ಸಲ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲ್ಲದೇ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದ.’ ‘ಇದೇ ರೀತಿ ಸೆ.02ರಂದು ಬಾಲಕಿಗೆ ಮತ್ತೆ ಕರೆ ಮಾಡಿದ ಬಾಲಕ ರಾತ್ರಿ ಮನೆಗೆ ಬರುವುದಾಗಿ ತಿಳಿಸಿದ್ದ. ಬೇಡವೆಂದು ಬಾಲಕಿ ಅಂಗಲಾಚಿದರೂ ಕೇಳದೇ ರಾತ್ರಿ 11.50 ಗಂಟೆಗೆ ಮನೆಯವರೆಲ್ಲ ಮಲಗಿದ್ದ ಹೊತ್ತಲ್ಲಿ ಮನೆಯೊಳಗೆ ಬಂದು ಮತ್ತೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ದೂರಿನಲ್ಲಿ ವಿವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಹೊತ್ತಿರುವ ಬಾಲಕ ನಾಪತ್ತೆಯಾಗಿದ್ದು ಆತನ ಪತ್ತೆಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.