Connect with us

    DAKSHINA KANNADA

    ಸ್ಫೋಟಕ ಪತ್ತೆ ಕಾರ್ಯದಲ್ಲಿ ಬೆನ್ನೆಲುಬಾಗಿದ್ದ ಪೊಲೀಸ್ ಶ್ವಾನ ಗೀತಾ ಇನ್ನಿಲ್ಲ

    ಮಂಗಳೂರು, ಸೆಪ್ಟೆಂಬರ್ 04 : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಗೆ ಸ್ಫೋಟಕ ಪತ್ತೆ ಕಾರ್ಯದಲ್ಲಿ ಬೆನ್ನೆಲುಬಾಗಿ ಸೇವೆ ಸಲ್ಲಿಸುತ್ತಿದ್ದ ಪೊಲೀಸ್ ಶ್ವಾನ ಗೀತಾ (ಸೆ.3) ಸಾವನ್ನಪ್ಪಿದೆ.

    ಪೊಲೀಸ್ ಇಲಾಖೆಯ ನಿಷ್ಟವಂತ ಶ್ವಾನವಾಗಿದ್ದ ಗೀತಾ 11 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದೆ. 2011ರಲ್ಲಿ ಜನಿಸಿದ ಗೀತಾ ಬೆಂಗಳೂರಿನನಲ್ಲಿ 11 ತಿಂಗಳ ಸುದೀರ್ಘ ತರಬೇತಿಯ ನಂತರ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸೇವೆಗೆ ಸೇರಿತ್ತು.

    ತನ್ನ 11 ವರ್ಷಗಳ ಸುಧೀರ್ಘ ಸೇವೆ ಸಂದರ್ಭ ಆಕೆ ಲೆಕ್ಕವಿಲ್ಲದಷ್ಟು ಸ್ಫೋಟಕ ಪತ್ತೆ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದೆ. ವಿಶೇಷವಾಗಿ ಜಿಲ್ಲೆಗಳಿಗೆ ಆಗಮಿಸುವ ಗಣ್ಯ ವ್ಯಕ್ತಿಗಳ ಭೇಟಿಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಸಮಯದಲ್ಲಿ ಪೊಲೀಸರಿಗೆ ಭದ್ರತಾ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುತ್ತಿದ್ದಳು.

    ಗೀತಾಳ ಅಗಲುವಿಕೆಗೆ ಪೊಲೀಸ್ ಇಲಾಖಾಧಿಕಾರಿಗಳು ಮತ್ತು ಸಿಬಂದಿ ವರ್ಗ ಕಂಬನಿ ಮಿಡಿದಿದೆ. ಗೀತಾಳಿಗೆ ನಾಳೆ ನಗರ ಪೊಲೀಸ್ ಕಚೇರಿ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಿವಿಧಾನಗಳನ್ನು ನೆರವೇರಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply