Connect with us

    LATEST NEWS

    ಸೈಕಲ್ ರಿಪೇರಿಗೆ ಬಂದ ಬಾಲಕನಿಗೆ ಲೈಂಗಿಕ ದೌರ್ಜನ್ಯ ಆರೋಪಿ ಆರೆಸ್ಟ್

    ಸೈಕಲ್ ರಿಪೇರಿಗೆ ಬಂದ ಬಾಲಕನಿಗೆ ಲೈಂಗಿಕ ದೌರ್ಜನ್ಯ ಆರೋಪಿ ಆರೆಸ್ಟ್

    ಬಂಟ್ವಾಳ ಮಾರ್ಚ್ 4: ಸೈಕಲ್ ರಿಪೇರಿಗೆಂದು ಬಂದ ಬಾಲಕನ ಮೇಲೆ ಸೈಕಲ್ ರಿಪೇರಿ ಮಾಡುವಾತ ಲೈಂಗಿಕ ದೌರ್ಜನ್ಯ ವೆಸಗಿದ ಘಟನೆ ನಡೆದಿದ್ದು, ಆರೋಪಿ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

    ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ನಯನಾಡು ನಿವಾಸಿ ರಮಾನಂದ ಶೆಣೈ ಬಂಧಿತ ಆರೋಪಿಯಾಗಿದ್ದು, ಇತ ತನ್ನ ಸೈಕಲ್ ರಿಪೇರಿ ಅಂಗಡಿಗೆ ಸೈಕಲ್ ನ್ನು ರಿಪೇರಿ ಮಾಡಿಸಲು ತೆರಳಿದ್ದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.

    ಬಾಲಕ ಸೈಕಲ್ ರಿಪೇರಿಗೆ ಆಗಮಿಸಿದ ಈ ವೇಳೆ ಆರೋಪಿ ಪುಸಲಾಯಿಸಿ ಮನೆಗೆ ಕರೆದುಕೊಂಡು ಹೋಗಿ, ಯಾರೂ ಇಲ್ಲದ ವೇಳೆ ಬಾಲಕನಿಗೆ ಲೈಂಗಿಕ ದೌರ್ಜನ್ಯವೆಸಗಲು ಪ್ರಯತ್ನಿಸಿದಾಗ ಬಾಲಕ ಪ್ರತಿರೋಧ ಒಡ್ಡಿ ಆರೋಪಿಯ ಹೊಟ್ಟೆಗೆ ಕಾಲಿನಿಂದ ತುಳಿದು ತಪ್ಪಿಸಿಕೊಂಡಿದ್ದಾನೆ.

    ಅಲ್ಲಿಂದ ಸ್ನೇಹ ಗಿರಿ ಎಂಬಲ್ಲಿಗೆ ತನ್ನ ಸೈಕಲ್ ನಲ್ಲಿ ಹೋಗುತ್ತಿದ್ದಾಗ, ಆರೋಪಿ ಹಿಂಬಾಲಿಸಿಕೊಂಡು ಬಂದು ಬಾಲಕನನ್ನು ತಡೆದು ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಸಾಯಿಸುತ್ತೇನೆ. ನಿನ್ನ ಸೈಕಲ್ ಅನ್ನು ಹುಡಿ ಮಾಡುತ್ತೇನೆಂದು ಬೆದರಿಕೆವೊಡ್ಡಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

    ಬಾಲಕನ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *