Connect with us

LATEST NEWS

ಮಾರ್ಚ್ 12 ರಂದು ಕಾಂಗ್ರೇಸ್ ಅಧ್ಯಕ್ಷ ರಾಹುಲ್ ಗಾಂಧಿ ಕಾಸರಗೋಡು ಜಿಲ್ಲೆ ಭೇಟಿ

ಮಾರ್ಚ್ 12 ರಂದು ಕಾಂಗ್ರೇಸ್ ಅಧ್ಯಕ್ಷ ರಾಹುಲ್ ಗಾಂಧಿ ಕಾಸರಗೋಡು ಜಿಲ್ಲೆ ಭೇಟಿ

ಮಂಗಳೂರು ಮಾರ್ಚ್ 4: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮಾರ್ಚ್ 12ರಂದು ಕಾಸರಗೋಡಿಗೆ ಆಗಮಿಸಲಿದ್ದು, ಇತ್ತೀಚೆಗೆ ಪೆರಿಯಾ ಕಲ್ಯೋಟ್ನಲ್ಲಿ ಹತ್ಯೆಗೀಡಾದ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಶರತ್ಲಾಲ್ ಮತ್ತು ಕೃಪೇಶ್ ಮನೆಗಳಿಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ.

ಮಾರ್ಚ್ 12 ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು, ಬಳಿಕ 11 ಗಂಟೆಗೆ ಕಾಸರಗೋಡು ಜಿಲ್ಲೆಯ ಕಲ್ಯೋಟ್ ತಲುಪಲಿದ್ದಾರೆ. ಪುಲ್ವಾಮ ಉಗ್ರರ ದಾಳಿಯಲ್ಲಿ ವೀರಮರಣ ಹೊಂದಿದ ವಯನಾಡಿನ ಸಿ.ಆರ್.ಪಿ.ಎಫ್.ಯೋಧ ವಿ.ವಿ.ವಸಂತ ಕುಮಾರ್ ಅವರ ಮನೆಗೂ ಭೇಟಿ ನೀಡಲಿದ್ದಾರೆ.

ಬಳಿಕ ಸಂಜೆ 5 ಗಂಟೆಗೆ ಕಲ್ಲಿಕೋಟೆಯಲ್ಲಿ ನಡೆಯುವ ಕಾಂಗ್ರೆಸ್ ಬಹಿರಂಗ ಅಧಿವೇಶನದಲ್ಲಿ ಮಾತನಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Facebook Comments

comments