LATEST NEWS
ಅನೈತಿಕ ಚಟುವಟಿಕೆಗೆ ಪ್ರಚೋದನೆ ನರ್ಸರಿ ಮಾಲಿಕನ ಬಂಧನ

ಅನೈತಿಕ ಚಟುವಟಿಕೆಗೆ ಪ್ರಚೋದನೆ ನರ್ಸರಿ ಮಾಲಿಕನ ಬಂಧನ
ಉಡುಪಿ ಜೂನ್ 10: ಕೆಲಸದಾಕೆಯೊಂದಿಗೆ ಅಸಭ್ಯ ವರ್ತನೆ ತೋರಿದ ಮಾಲಿಕನನ್ನು ಉಡುಪಿ ಪೊಲೀಸರು ಬಂಧಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ ಕಾಪುವಿನ ಕೊತ್ವಲ್ ಕಟ್ಟೆಯ ನರ್ಸರಿ ಮಾಲಿಕ ಮೂಳೂರು ನಿವಾಸಿ ಹುಸೇನ್ ಬಂಧಿತ ಆರೋಪಿ. ಕೊತ್ಪಾಲ್ ಕಟ್ಟೆಯಲ್ಲಿ ನರ್ಸರಿ ನಡೆಸುತ್ತಿರುವ ಹುಸೇನ್ ನರ್ಸರಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಗೆ ಅನೈತಿಕ ಚಟುವಟಿಕೆಗೆ ಪ್ರಚೋದಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಅಲ್ಲದೆ ಆರೋಪಿ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಪ್ರಚೋದಿಸುತ್ತಿದ್ದ ಎಂದು ಕೆಲಸದಾಕೆ ಕಾಪು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಕಾಪು ಪೊಲೀಸರು ಆರೋಪಿ ನರ್ಸರಿ ಮಾಲಿಕ ಹುಸೇನ್ ನನ್ನು ಬಂಧಿಸಿದ್ದಾರೆ.