Connect with us

LATEST NEWS

ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿ ಅಪಾಯದಲ್ಲಿ ಸಿಕ್ಕಿದ್ದ ಮೀನುಗಾರರ ರಕ್ಷಣೆ

ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿ ಅಪಾಯದಲ್ಲಿ ಸಿಕ್ಕಿದ್ದ ಮೀನುಗಾರರ ರಕ್ಷಣೆ

ಮಂಗಳೂರು ಜೂನ್ 09 : ಕರಾವಳಿಯಲ್ಲಿ ಮುಂಗಾರು ಮಳೆ ಭಾರಿ ಪ್ರಮಾಣದಲ್ಲಿ ಸುರಿಯುತ್ತಿದೆ. ಹವಾಮಾನ ಇಲಾಖೆ ಕರಾವಳಿಯಲ್ಲಿ ಜೂನ್ 6 ರಿಂದ 10 ರವರೆಗೆ ಭಾರಿ ಮಳೆ ಸುರಿಯುವ ಮುನ್ನೆಚ್ಚರಿಕೆಯನ್ನು ನೀಡಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಿದೆ.

ಈ ನಡುವೆ ಜಿಲ್ಲಾಡಳಿತ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ನೀಡಿರುವ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಮೀನುಗಾರಿಕೆಗೆ ತೆರಳಿ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ತಮಿಳುನಾಡು ಮೂಲದ 10 ಮೀನುಗಾರರನ್ನು ರಕ್ಷಿಸಲಾಗಿದೆ.

ಕೇರಳದ ಕೊಚ್ಚಿಯಿಂದ ಮೀನುಗಾರಿಕೆಗೆ ಹೊರಟಿದ್ದ ಸಂತ ಜೋಸೆಫ್ ಹೆಸರಿನ ಮೀನುಗಾರಿಕಾ ದೋಣಿಯ ಇಂಜಿನ್ ನಿನ್ನೆ ರಾತ್ರಿ ಕೈಕೊಟ್ಟಿತ್ತು. ಮಂಗಳೂರಿ ನಿಂದ 15 ನಾಟಿಕಲ್ ಮೈಲ್ಸ್ ದೂರದಲ್ಲಿ ಈ ದೋಣಿ ಅಪಾಯಕ್ಕೆ ಸಿಲುಕಿತ್ತು.

ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಮುದ್ರ ಪ್ರಕ್ಷುಬ್ದಗೊಂಡಿದ್ದು, ಮೀನುಗಾರಿಕಾ ಬೋಟ್ ಅಪಾಯದಲ್ಲಿ ನಿಲುಕಿರುವ ಮಾಹಿತಿ ಪಡೆದ ಕೋಸ್ಟಗಾರ್ಡ್ ನ ಐಸಿಜಿಎಸ್ ಅಮಾರ್ತ್ಯ ನೌಕೆ ಅಪಾಯದಲ್ಲಿ ಸಿಲುಕಿದ್ದ ಮೀನುಗಾರರನ್ನು ರಕ್ಷಿಸಿದೆ. ಶುಕ್ರವಾರ ತಡರಾತ್ರಿ ಕಾರ್ಯಾಚರಣೆ ಅರಂಭವಾಗಿದ್ದರೂ ಮೀನುಗಾರರ ರಕ್ಷಣೆ ಸಾದ್ಯವಾಗಿರಲಿಲ್ಲ ಆದರೆ ಇಂದು ಮುಂಜಾನೆ 10 ಮಂದಿ ಮೀನುಗಾರರನ್ನು ರಕ್ಷಿಸಿದ ಕೋಸ್ಟಗಾರ್ಡ್ ಪಡೆ ಮೀನುಗಾರಿಕಾ ಬೋಟನ್ನು ಸುರಕ್ಷಿತವಾಗಿ ಎನ್‌ಎಂಪಿಟಿಗೆ ಎಳೆದು ತಂದಿದೆ.

Facebook Comments

comments