Connect with us

    LATEST NEWS

    ಪಾಣಿಮಂಗಳೂರು – ಕಾರುಗಳ ನಡುವೆ ಸರಣಿ ಅಪಘಾತ – ಒಂದು ಗಂಟೆಗೂ ಅಧಿಕ ಟ್ರಾಫಿಕ್ ಜಾಮ್

    ಬಂಟ್ವಾಳ ಸೆಪ್ಟೆಂಬರ್ 19 : ಕಾರುಗಳ ನಡುವೆ ನಡೆದ ಸರಣಿ ಅಪಘಾತದಿಂದಾಗಿ ಸುಮಾರು ಒಂದು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾದ ಘಟನೆ ಪಾಣೆಮಂಗಳೂರು ಸೇತುವೆಯಲ್ಲಿ ನಡೆದಿದೆ.


    ಪಾಣೆಮಂಗಳೂರು ಸೇತುವೆಯಲ್ಲಿ ಎರಡು ಕಾರುಗಳು ಡಿಕ್ಕಿಯಾಗಿದ್ದು, ಇದರ ಬೆನ್ನಲ್ಲೇ ಮತ್ತೆ ಎರಡು ವಾಹನಗಳು ಡಿಕ್ಕಿ ಯಾಗಿದೆ. ಡಿಕ್ಕಿಯ ರಭಸಕ್ಕೆ ಎರಡು ಕಾರುಗಳು ಜಖಂಗೊಂಡಿದೆ. ಆದರೆ ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯವಾಗದೆ ಪಾರಾಗಿದ್ದಾರೆ.


    ಈ ನಡುವೆ ಪಾಣೆಮಂಗಳೂರು ಸೇತುವೆ ಸಮೀಪ ನೆಹರು ನಗರ ಎಂಬಲ್ಲಿ ಲಾರಿಯೊಂದರ ಟಯರ್ ಕೆಟ್ಟು ಹೋಗಿ ನಿಂತಿತ್ತು. ಹೀಗಾಗಿ ತಾಸುಗಟ್ಟಲೆ ವಾಹನಗಳು ಸಾಲಾಗಿ ನಿಂತಿದ್ದವು. ಸೇತುವೆಯಲ್ಲಿ ಅಪಘಾತ ಸಂಭವಿಸಿದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಡಿಕ್ಕಿಯಾಗಿ ಸೇತುವೆ ಮೇಲಿದ್ದ ವಾಹನಗಳನ್ನು ಕ್ಲಿಯರ್ ಮಾಡಲು ಟ್ರಾಫಿಕ್ ಪೋಲೀಸರು ಹರಸಹಾಸ ಪಟ್ಟರು. ಅಪಘಾತ ನಡೆದು ಕೆಲವೇ ಹೊತ್ತಿನಲ್ಲಿ ವಾಹನಗಳ ಸಾಲು ಸುಮಾರು ಉದ್ದಕ್ಕೆ ತಲುಪಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾದ ಹಿನ್ನೆಲೆಯಲ್ಲಿ ವಾಹನ ಸವಾರರು ಪಾಣೆಮಂಗಳೂರು ‌ಪೇಟೆ ಮೂಲಕ ಹಳೆ ಸೇತುವೆ ಮೂಲಕ ಸಂಚಾರಕ್ಕೆ ಪ್ರಯತ್ನ ಮಾಡಿದರಾದರೂ ಅಲ್ಲಿಯೂ ಟ್ರಾಫಿಕ್ ಸಮಸ್ಯೆ ಉಂಟಾಯಿತು.


    ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ವಾಹನಗಳು ಹೋಗಿ ಸಾಲು ಸಾಲಾಗಿ ನಿಂತಿರುವ ಪೋಟೋ ವೈರಲ್ ಆಗಿದೆ. ರಾತ್ರಿ ಹೊತ್ತು ವಾಹನಗಳ ಲೈಟ್ ಮತ್ತು ನೇತ್ರಾವತಿ ನದಿಯ ನೀರು ಕಂಗೊಳಿಸುವ ಚಿತ್ರವನ್ನು ಪಾಣೆಮಂಗಳೂರು ಮಂಗಳೂರು ಹೊಸ ಸೇತುವೆಯಿಂದ ಕ್ಲಿಕ್ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply