LATEST NEWS
ಸೀರಿಯಲ್ ಕಿಲ್ಲರ್ ಸೈನೈಡ್ ಮೋಹನ್‌ಗೆ ಜೀವಾವಧಿ ಶಿಕ್ಷೆ : ನ್ಯಾಯಾಲಯ ತೀರ್ಪು

ಸೀರಿಯಲ್ ಕಿಲ್ಲರ್ ಸೈನೈಡ್ ಮೋಹನ್‌ಗೆ ಜೀವಾವಧಿ ಶಿಕ್ಷೆ : ನ್ಯಾಯಾಲಯ ತೀರ್ಪು
ಮಂಗಳೂರು, ಜನವರಿ 31 ; ಸೀರಿಯಲ್ ಕಿಲ್ಲರ್ ಸೈನಡ್ ಮೋಹನ್‌ಗೆ ಜೀವಾವಧಿ ಶಿಕ್ಷೆ ನೀಡಿ ನ್ಯಾಯಾಲಯ ಅದೇಶ ನೀಡಿದೆ.
6ನೇ ಪ್ರಕರಣದ ವಿಚಾರಣೆ ನಡೆಸಿರ ಮಾನ್ಯ ೬ನೇ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ಈ ತೀರ್ಪು ನೀಡಿದ್ದು ಮೋಹನನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಪ್ರಸ್ತುತ ಬೆಳಗಾವಿಯ ಹಿಂಡಲಗಾ ಜೈಲ್ ನಲ್ಲಿರುವ ಸೈನೆಡ್ ಮೋಹನನ್ನು ಜೈಲ್ ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ನ್ಯಾಯಾಧೀಶ ಡಿಟಿ ಪುಟ್ಟರಂಗಸ್ವಾಮಿ ಮೋಹನನಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತು.
23-4-2009 ರಂದು ಈ ಪ್ರಕರಣ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ದ ಮಿತ್ತೂರಿನ ಯುವತಿಯನ್ನು ಮೈಸೂರು ಬಸ್ ಸ್ಟ್ಯಾಂಡ್ ನಲ್ಲಿ ಸೈನೆಡ್ ನೀಡಿ ಯುವತಿಯ ಹತ್ಯೆ ಮಾಡಿದ್ದ.
ಒಟ್ಟು 20 ಯುವತಿಯರ ಹತ್ಯೆ ಮಾಡಿರುವ ಆರೋಪ ಹೊಂದಿರುವ ಸೈನೆಡ್ ಮೋಹನನ ಇನ್ನು ಕೆಲ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ.