LATEST NEWS
ಬೆಳಿಗ್ಗೆಯಿಂದ ಕರಾವಳಿಯಲ್ಲಿ ಸರಣಿ ಅಪಘಾತಗಳು……!

ಬೆಳಿಗ್ಗೆಯಿಂದ ಕರಾವಳಿಯಲ್ಲಿ ಸರಣಿ ಅಪಘಾತಗಳು……!
ಮಂಗಳೂರು ಫೆಬ್ರವರಿ 16: ಕರಾವಳಿಯಲ್ಲಿ ಇಂದು ಸರಣಿ ಅಪಘಾತಗಳ ದಿನವಾಗಿ ಮಾರ್ಪಟ್ಟಿದೆ. ನಿನ್ನೆ ಕಾರ್ಕಳದ ಮಾಳದ ದುರ್ಘಟನೆಯಲ್ಲಿ 9 ಮಂದಿ ಪ್ರಾಣ ಕಳೆದುಕೊಂಡಿದ್ದರು. ಆ ಘಟನೆ ಮಾಸುವ ಮುನ್ನವೆ ಇಂದು ಜಿಲ್ಲೆಯ ವಿವಿಧ ಕಡೆಗಳಲ್ಲಿ ಅಪಘಾತ ಪ್ರಕರಣಗಳು ಸಂಭವಿಸಿದ್ದು ಆದರೆ ಯಾವುದೇ ಪ್ರಾಣಾಪಯ ಸಂಭವಿಸಿಲ್ಲ.
ಇಂದು ಬೆಳಿಗ್ಗೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಡ್ಡಹೊಳೆ ಎಂಬಲ್ಲಿ ಟೂರಿಸ್ಟ್ ಟೆಂಪೋವೊಂದು ಉರುಳಿಬಿದ್ದ ಪರಿಣಾಮ 20 ಮಂದಿ ಗಾಯಗೊಂಡಿದ್ದರು. ಮಿನಿಬಸ್ ಸಕಲೇಶಪುರದಿಂದ ಪುತ್ತೂರಿನಲ್ಲಿ ನಡೆಯುವ ವಿವಾಹ ಸಮಾರಂಭಕ್ಕೆ ಹೊರಟ್ಟಿದ್ದು ಅಡ್ಡಹೊಳೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಮಿನಿಬಸ್ಸಿನಲ್ಲಿದ್ದ ಸುಮಾರು 20 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಬಿ.ಸಿ. ರೋಡ್-ಪೊಳಲಿ ರಸ್ತೆಯ ಕಲ್ಪನೆ ತಿರುವಿನಲ್ಲಿ ಎರಡು ಬಸ್‌ಗಳ ನಡುವೆ ಡಿಕ್ಕಿ ಹೊಡೆದಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಎರಡೂ ಬಸ್‌ಗಳು ಬಿ.ಸಿ.ರೋಡ್‌ನಿಂದ ಪೊಳಲಿ ಕಡೆಗೆ ಸಂಚರಿಸುತ್ತಿದ್ದವು. ಒಂದರ ಹಿಂದೊಂದು ಬರುತ್ತಿದ್ದ ಬಸ್‌ಗಳು ಕಲ್ಪನೆ ತಿರುವಿನಲ್ಲಿ ಢಿಕ್ಕಿಯಾಗಿದ್ದು, ಮುಂದಿನಿಂದ ಹೋಗುತ್ತಿದ್ದ ರೂಟ್ ಬಸ್‌ಗೆ ಹಿಂದಿನಿಂದ ಬರುತ್ತಿದ್ದ ಮದುವೆ ದಿಬ್ಬಣದ ಬಸ್ ಢಿಕ್ಕಿ ಹೊಡೆದಿದೆ.