DAKSHINA KANNADA
ಸೆಪ್ಟೆಂಬರ್ 13 ಮಂಗಳೂರಿನಲ್ಲಿ ರಾಷ್ಟ್ರ ಮಟ್ಟದ ಶ್ರೀಕೃಷ್ಣ ವೇಷ ಸ್ಪರ್ಧೆ
ಮಂಗಳೂರು, ಸೆಪ್ಟೆಂಬರ್ 09 : ಶ್ರೀ ಕೃಷ್ಣ ಜಯಂತಿ ಪ್ರಯುಕ್ತ ಕಳೆದ ಮೂರು ದಶಕಗಳಿಂದ ಶ್ರೀಕೃಷ್ಣ ವೇಷ ಸ್ಪರ್ಧೆಗೆ ವೇದಿಕೆಯಾಗಿರುವ ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಈ ಬಾರಿಯೂ ರಾಷ್ಟ್ರಮಟ್ಟದ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆ ಆಯೋಜಿಸಿದೆ.
ಇದೇ ಸೆಪ್ಟೆಂಬರ್ 13 ರಂದು ಮಂಗಳೂರಿನ ಕದ್ರಿ ದೇವಾಳದ ಆವರಣದಲ್ಲಿ ಈ ಉತ್ಸವವನ್ನು ಆಯೋಜಿಸಿದೆ.
ಈ ಬಾರಿ 3 ಸಾವಿರಕ್ಕೂ ಅಧಿಕ ಚಿಣ್ಣರು ಭಾಗವಹಿಸುವ ನಿರೀಕ್ಷೆಯಿದೆ . ಕದ್ರಿ ಮಂಜುನಾಥ ದೇವಾಳದ ಪ್ರಾಂಗಣದ ಎಂಟು ವೇದಿಕೆಗಳಲ್ಲಿ ಏಕಕಾಲಕ್ಕೆ ಈ ಸ್ಪರ್ಧೆಗಳು ನಡೆಯಲಿವೆ. ಇದರೊಟ್ಟಿಗೆ ವಿವಿಧ ಕಾರ್ಯಕ್ರಮಗಳನ್ನು ಈ ರಾಷ್ಟ್ರೀಯ ಮಕ್ಕಳ ಉತ್ಸವದಲ್ಲಿ ಜೋಡಿಸಲಾಗಿದೆ. ಈ ಬಾರಿ ಕಂದ ಕೃಷ್ಣ ,ಮುದ್ದು ಕೃಷ್ಣ , ತುಂಟ ಕೃಷ್ಣ ,ಬಾಲಕೃಷ್ಣ ,ಕಿಶೋರ ಕೃಷ್ಣ ,ಶ್ರೀ ಕೃಷ್ಣ , ಗೀತಾ ಕೃಷ್ಣ ,ಯಕ್ಷ ಕೃಷ್ಣ, ರಾಧಾಕೃಷ್ಣ ಯಶೋಧ ಕೃಷ್ಣ ಹೀಗೇ ಇಪ್ಪತ್ತೆಂಟು ವಿಭಾಗದಲ್ಲಿ ಈ ಸ್ಪರ್ಧೆ ನಡೆಯಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸೆಪ್ಟೆಂಬರ್ 13 ರಂದು ಕೃಷ್ಣಾಷ್ಟಮಿ ಪ್ರಯುಕ್ತ ನಡೆಯುವ ರಾಷ್ಟ್ರಮಟ್ಟದ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆ ಈ ಬಾರಿ 28 ವಿಭಾಗಗಳಲ್ಲಿ ನಡೆಯಲಿದೆ. ಮೂರು ದಶಕಳಿಂದ ಜನತೆ ಕೂಡ ಇದಕ್ಕೆ ಬಾರಿ ಬೆಂಬಲ ನೀಡುತ್ತಿದೆ. ದೇಶ ವಿದೇಶಗಳಿಂದ ಜನರು ಇದರಲ್ಲಿ ಪಾಲ್ಗೊಳ್ಳಬೇಕೆಂಬ ಇಚ್ಚೆಯಿಂದ ಬರುತ್ತಿರುತ್ತಾರೆ ಅದೇ ದೊಡ್ಡ ಸಮತೋಷ, ಸಂಭ್ರಮ. ಇದರೊಟ್ಟಿಗೆ ರಂಗೋಲಿಯಲ್ಲಿ ಶ್ರೀಕೃಷ್ಣ ರಚನೆ, ಛಾಯಾಚಿತ್ರಗಾರರಿಗಾಗಿ ಛಾಯಾ ಕೃಷ್ಣ ಸ್ಪರ್ಧೆ , ಶ್ರೀಕೃಷ್ಣ ವರ್ಣ ವೈಭವ ಚಿತ್ರ ರಚನಾ ಸ್ಪರ್ಧೆ ಕೂಡ ಅಯೋಜಿಲಾಗಿದ್ದು ಇದು ಜನರ ಉತ್ಸವ ಆಗಬೇಕೆಂಬುದೇ ನಮ್ಮ ಇಚ್ಚೆ ಎಂದಿದ್ದಾರೆ.