Connect with us

LATEST NEWS

ಮೆಡಿಕಲ್ ಸೀಟು ಕೊಡಿಸುವ ನೆಪದಲ್ಲಿ ವಂಚನೆ 10 ಮಂದಿ ಬಂಧನ

Share Information

ಮಂಗಳೂರು ಸೆಪ್ಟೆಂಬರ್ 9: ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚಿಸುತ್ತದ್ದ ಬೃಹತ್ ಜಾಲವೊಂದನ್ನು ಮಂಗಳೂರು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವಂಚನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ 10  ಮಂದಿ ಆರೋಪಿಗಳನ್ನು ಮಂಗಳೂರು ಕದ್ರಿ ಠಾಣೆ ಪೊಲೀಸರು ಬಂಧಿಸಿದ್ದಾರೆ . ಮಂಗಳೂರಿನ ಪ್ರತಿಷ್ಠಿತ ಎ.ಜೆ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ನಂಬಿಸಿ ಆರೋಪಿಗಳು ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ ಎಂದು ಹೇಳಲಾಗಿದೆ .

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮೂಲದ ಅಜಯ್ ನಾಯಕ್ ಮುಖರ್ಜಿ (41), ಉತ್ತರ ಪ್ರದೇಶ ಮೂಲದ ಸೌರಭ್ ಗುಪ್ತಾ (32), ಜಾರ್ಖಂಡ್ ಮೂಲದ ಅನೂಪ್ ಸಿಂಗ್ (35), ಬಿಹಾರ ಮೂಲದ ಅಮಿತ್ ರಂಜನ್(25),  ಕಲ್ಕತ್ತಾ ಮೂಲದ ಸ್ವಪನ್ ಬಿಸ್ವಾಸ್(54), ಹೈದರಾಬಾದ್ ಮೂಲದ ರಾಜೀವ್ ಕುಮಾರ್(30), ಕಲ್ಕತ್ತಾ ಮೂಲದ ಅನಿಲ್ ತುಲ್ಕಿರಾಮ್ (62),ಜಾರ್ಖಂಡ್ ಮೂಲದ ಮನೀಷ ಕುಮಾರ್ ಷಾ(30), ಧೀರಜ್ ಶರ್ಮಾ(30), ಹಾಗೂ ಸಂಜಯ್ ಕುಮಾರ್ ಮಾಥುರ್ (26)ಎಂಬವರನ್ನು ಬಂಧಿಸಲಾಗಿದೆ .

ಬಂಧಿತ ಆರೋಪಿಗಳು ದೆಹಲಿ ಮೂಲದ ಕಮಲ್ ಸಿಂಗ್ ರಾಜ್ ಪುರೋಹಿತ್ ಹಾಗು ರಾಜಸ್ಥಾನ ಮೂಲದ ಮಹೇಂದರ್ ಎಂಬುವರ ಮಕ್ಕಳಿಗೆ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ನಂಬಿಸಿ 5.40 ಲಕ್ಷ ರೂಪಾಯಿ ಮೌಲ್ಯದ 2 ಡಿಮಾಂಡ್ ಡ್ರಾಫ್ಟ್ ಪಡೆದು ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ.

ಬಂಧಿತ ಆರೋಪಿಗಳು ಎ.ಜೆ ಮೆಡಿಕಲ್ ಕಾಲೇಜಿನ ಅಧಿಕಾರಿಗಳೆಂದು ನಂಬಿಸಲು ನಕಲಿ ಗುರುತು ಚೀಟಿ ಮುದ್ರಿಸಿದ್ದರು. ತಾವು ಮೆಡಿಕಲ್ ಕಾಲೇಜಿನ ಪದಾಧಿಕಾರಿಗಳೆಂದು ನಂಬಿಸಿ ವಿದ್ಯಾರ್ಥಿಗಳಿಗೆ ವಂಚಿಸುತ್ತಿದ್ದಾರೆ ಎಂದು ದೂರಲಾಗಿದೆ . ಈ ಕುರಿತು ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು .

ಈ ಕುರಿತು ತನಿಖೆ ನಡೆಸಿದ ಕದ್ರಿ ಪೊಲೀಸರು ಆರೋಪಿಗಳನ್ನು ಮಂಗಳೂರು ಹೊರವಲಯದ ಸುರತ್ಕಲ್ ನ ಲಾಡ್ಜ್ ಒಂದರಿಂದ ಬಂಧಿಸಿದ್ದಾರೆ. ಬಂಧಿತರಿಂದ 5.40 ಲಕ್ಷ ರೂಪಾಯಿ ಮೌಲ್ಯದ 2 ಡಿಡಿ , 20ಮೊಬೈಲ್ ಫೋನ್ , 2 ಲ್ಯಾಪ್ ಟಾಪ್ , 1 ಐಪಾಡ್ , 1ಪ್ರಿಂಟರ್, ೧೦ ಲಕ್ಷ ರೂಪಾಯಿ ನಗದು,1 ಇನ್ನೋವಾ ಕಾರು , 1 ಚವರ್ಲೇಟ್ ಕಾರು ವಶಪಡಿಸಿಕೊಳ್ಳಲಾಗಿದೆ .

ಆರೋಪಗಳಿಂದ ವಶಪಡಿಸಿಕೊಳ್ಳಲಾದ ಸೊತ್ತುಗಳ ಒಟ್ಟು ಮೌಲ್ಯ 30.98 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ ಅದಲ್ಲದೆ ಆರೋಪಿಗಳಿಂದ ಮೆಡಿಕಲ್ ಕಾಲೇಜಿನ ನಕಲಿ ಐಡಿ ಕಾರ್ಡ್ , ಎ.ಜೆ ಮೆಡಿಕಲ್ ಸೈನ್ಸ್ ಮತ್ತು ದೇರಳಕಟ್ಟೆಯ ಕೆ .ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಮೊಹರನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ .


Share Information
Advertisement
Click to comment

You must be logged in to post a comment Login

Leave a Reply