LATEST NEWS
ಮಂಗಳೂರು – ಹಿರಿಯ ವಕೀಲ ಬಿ. ಹರೀಶ್ ಮೃತದೇಹ ಮನೆಯಲ್ಲಿ ಪತ್ತೆ…!!

ಮಂಗಳೂರು ಜುಲೈ 12 : ನಗರದ ಹಿರಿಯ ವಕೀಲ ಬಿ.ಹರೀಶ್ ಆಚಾರ್ಯ (60) ಬಾರೆಬೈಲ್ ಬಿಜೈಯ ನಿರ್ಮಲ ನಿವಾಸದಲ್ಲಿ ಅಸ್ವಾಭಾವಿಕವಾಗಿ ಮೃತಪಟ್ಟಿರುವುದು ಮಂಗಳವಾರ ಬೆಳಕಿಗೆ ಬಂದಿದೆ.
ಮೃತ ದೇಹವು ಭಾಗಶಃ ಕೊಳೆತ ಸ್ಥಿತಿಯಲ್ಲಿದ್ದು, ಎರಡು ದಿನಗಳ ಹಿಂದೆ ಹೃದಯಾಘಾತ ಅಥವಾ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಅವರು ಮನೆಯಲ್ಲಿ ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದರು.

ಜು.7ರಂದು ನ್ಯಾಯಾಲಯಕ್ಕೆ ವಕಾಲತ್ತಿಗೆಂದು ಹೋಗಿದ್ದರು. ಜು.8ರಂದು ಅಂಗಡಿಯಿಂದ ಪತ್ರಿಕೆ ತೆಗೆದುಕೊಂಡು ತೆರಳಿದ್ದರು. ಜೂ.9ರಂದು ಅವರ ಜೂನಿಯರ್ ವಕೀಲರು ಕರೆ ಮಾಡಿದಾಗ ಸ್ವೀಕರಿಸಿರಲಿಲ್ಲ. 10ರಂದು ಕೂಡಾ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಮಂಗಳವಾರ ಅವರ ಮನೆಗೆ ಬಂದು ನೋಡುವಾಗ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.