ಮಂಗಳೂರು ,ಆಗಸ್ಟ್ 3: ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಮೂರು ಮಂದಿ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ .ಬಂಧಿತರನ್ನು ಲಾಯ್ ವೇಗಸ್ ,ಅಲ್ಮೇಡಾ ಕರ್ಕಡ ,ಹಾಗೂ ಪ್ರದೀಪ್ ಪ್ರಭು ಎಂದು ಗುರುತಿಸಲಾಗಿದೆ .ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ಗಾಂಜಾವನ್ನು ತಂದು ಮಂಗಳೂರಿನಲ್ಲಿ ಬಂಧಿತ ಆರೋಪಿಗಳು ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ . ಬಂಧಿತರಿಂದ 1.2 ಕೆಜಿ ಗಾಂಜಾ, ಬೈಕ್, ಮೂರು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ .