Connect with us

    LATEST NEWS

    ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹೆಣ್ಣು ಬಾಕನ ಸೆಲ್ಪಿ

    ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹೆಣ್ಣು ಬಾಕನ ಸೆಲ್ಪಿ

    ಉಡುಪಿ ಮಾರ್ಚ್ 16: ಯುವಕನೋರ್ವ ಹಲವಾರು ಯುವತಿಯರೊಂದಿಗೆ ತೆಗೆಸಿಕೊಂಡ ಸೆಲ್ಪಿ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈತ 10ಕ್ಕೂ ಹೆಚ್ಚು ಯುವತಿಯರನ್ನು ಯಾಮಾರಿಸಿದ್ದಾನೆ ಎಂದು ಆರೋಪಿಸಲಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಸಬೇಕೆಂದು ಒತ್ತಾಯಿಸಲಾಗಿದೆ.

    ಪೋಟೋದಲ್ಲಿ ಇರುವ ಯುವಕ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಂದಳಿಕೆಯ ಮಂಜರಪಾಲ್ಕೆ ನಿವಾಸಿ ಸುಜಿತ್ ಶೆಟ್ಟಿ ಎಂದು ಗುರುತಿಸಲಾಗಿದ್ದು,

    ಈತ ನಿಟ್ಟೆ ಪೊಲೀಸ್ ಸ್ಟೇಷನ್ ನಲ್ಲಿ ಹೋಮ್ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದಾನೆ ಎಂದು ಹೇಳಲಾಗಿದೆ.

    ಯುವತಿಯರಿಗೆ ತಾನು ಪೊಲೀಸ್ ಇಲಾಖೆಯಲ್ಲಿರುವುದಾಗಿ ಹೇಳಿ ಸ್ನೇಹ ಸಂಪಾದಿಸಿ ಸಂಬಂಧ ಬೆಳೆಸುತ್ತಿದ್ದ ಎಂದು ಹೇಳಲಾಗಿದೆ.

    ಯುವತಿಯರನ್ನು ಅಜ್ಞಾತ ಸ್ಥಳಗಳಿಗೆ ಕರೆದುಕೊಂಡು ಹೋಗಿ ಅವರೊಂದಿಗೆ ಮಜಾ ಉಡಾಯಿಸುತ್ತಿದ್ದ ಹಾಗೂ ಆ ಸಂದರ್ಭದಲ್ಲಿ ಸೆಲ್ಪಿ ಕ್ಲಿಕ್ಕಿಸುತ್ತಿದ್ದ ಎಂದು ಹೇಳಲಾಗಿದೆ.

    ಈತನ ಬಲೆಗೆ 10ಕ್ಕೂ ಹೆಚ್ಚು ಯುವತಿಯರು ಸಿಲುಕಿದ್ದು, ಅವರನ್ನು ರಕ್ಷಿಸಬೇಕೆಂದು ಒತ್ತಾಯ ಕೇಳಿ ಬರುತ್ತಿದೆ.

    ಒಂದು ಮಾಹಿತಿಯ ಪ್ರಕಾರ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಪೋಟೋ ವೈರಲ್ ಆಗುತ್ತಿದ್ದಂತೆ ಸುಜಿತ್ ಶೆಟ್ಟಿ ತಲೆ ಮರೆಸಿಕೊಂಡಿದ್ದಾನೆ.

    ಉಡುಪಿ ಪೊಲೀಸರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿ ಸುಜಿತ್ ಶೆಟ್ಟಿ ಬಂಧನಕ್ಕೆ ಬಲೆ ಬೀಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply