DAKSHINA KANNADA
ಉಡುಪಿ – ಪ್ರೌಢಶಾಲೆಗಳ ಸುತ್ತಮುತ್ತ ಸೆಕ್ಷನ್ 144 ಜಾರಿ

ಉಡುಪಿ ಫೆಬ್ರವರಿ 13: ರಾಜ್ಯಾದ್ಯಂತ ಭಾರಿ ವಿವಾದ ಸೃಷ್ಠಿಸಿರುವ ಹಿಜಬ್ ವಿವಾದಗಳ ನಡುವೆ ಇದೀಗ ಫ್ರೌಢ ಶಾಲೆಗಳ ಆರಂಭಕ್ಕೆ ಸರಕಾರ ಮುಂದಾಗಿದ್ದು, ಬಂದೋಬಸ್ತ್ ವ್ಯವಸ್ಥೆಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ನೋಡಿಕೊಳ್ಳಬೇಕೆಂದು ಸರಕಾರ ಆದೇಶಿಸಿದೆ. ಈ ಹಿನ್ನಲೆ ಸೋಮವಾರದಿಂದ ಶಿಕ್ಷಣ ಸಂಸ್ಥೆಗಳು ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳ 200 ಮೀಟರ್ ಸುತ್ತ ಮುತ್ತ ಸೆಕ್ಷನ್ 144 ಜಾರಿಗೊಳಿಸಿ ಜಿಲ್ಲಾಧಿಕಾರಿ ಕೂರ್ಮರಾವ್ ಆದೇಶ ಹೊರಡಿಸಿದ್ದಾರೆ.
ಫೆಬ್ರವರಿ 14 ರಿಂದ ಫೆಬ್ರವರಿ 19 ವರೆಗೆ ನಿಷೇಧಾಜ್ಞೆ ಜಾರಿಯಲ್ಲಿದ್ದು, ಈ ವೇಳೆ ಶಾಲೆಯ ಸುತ್ತಮುತ್ತ ಗುಂಪು ಸೇರುವಂತಿಲ್ಲ. ಪ್ರತಿಭಟನೆ, ಮೆರವಣಿಗೆ ಪರ ವಿರುದ್ಧ ಘೋಷಣೆ ಕೂಗುವಂತಿಲ್ಲ. ಯಾವುದೇ ವ್ಯಕ್ತಿ ಜಾತಿ ಧರ್ಮಕ್ಕೆ ನೈತಿಕತೆ ವಿರುದ್ಧ ನಡೆದುಕೊಳ್ಳುವಂತಿಲ್ಲ. ಶಸ್ತ್ರ, ದೊಣ್ಣೆ, ಕತ್ತಿ ಮತ್ತಿತರ ಮಾರಾಕಾಯುದಗಳ ಸಾಗಾಟಕ್ಕೆ ನಿಷೇದ, ಪ್ರಚೋದನಕಾರಿ ಭಾಷಣ, ಸಂಗೀತ, ಹಾಡು, ಘೋಷಣೆಗಳನ್ನು ಕೂಗುವಂತೆ ಇಲ್ಲ ಎಂದು ಆದೇಶಿಸಿದ್ದಾರೆ.

ಫೆಬ್ರವರಿ 14 ಬೆಳಿಗ್ಗೆ6 ಗಂಟೆಯಿಂದ ಫೆಬ್ರವರಿ 19 ಸಂಜೆ 6 ಗಂಟೆಯ ತನಕ ಸೆಕ್ಷನ್ ಜಾರಿಯಲ್ಲಿದ್ದು, ಉಡುಪಿ ಜಿಲ್ಲೆ ಎಸ್ ಪಿ ಮನವಿ ಮೇರೆಗೆ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.