DAKSHINA KANNADA
24 ವರ್ಷಗಳ ಬಳಿಕ ದ್ವಿತೀಯ ಪಿಯುಸಿ ಪಾಸಾದ ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ
ಸುಳ್ಯ ಎಪ್ರಿಲ್ 23: ಬರೋಬ್ಬರಿ 24 ವರ್ಷಗಳ ಬಳಿಕ ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಭಟ್ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪಾಸಾಗಿದ್ದಾರೆ.
ಬಡ ಕುಟುಂಬದಲ್ಲಿ ಜನಿಸಿದ್ದ ಭಾರತಿ 1997-98ರಲ್ಲಿ 8ನೇ ತರಗತಿ ತೇರ್ಗಡೆ ಹೊಂದಿದ್ದು, ತಂದೆಯ ವಿಯೋಗದಿಂದಾಗಿ ವಿದ್ಯಾಭ್ಯಾಸ ಮುಂದುವರಿಸಲಾಗಲಿಲ್ಲ. ಅನಂತರ ವೆಂಕಟ್ರಮಣ ಭಟ್ ಅವರನ್ನು ವಿವಾಹವಾಗಿ ಪಾಣಾಜೆಯಲ್ಲಿ ನೆಲೆಸಿರುವ ಅವರು 2020-21ನೇ ಸಾಲಿನ ಗ್ರಾ.ಪಂ. ಚುನಾ ವಣೆಯಲ್ಲಿ ಸದಸ್ಯೆ ಯಾಗಿ ಆಯ್ಕೆಯಾಗಿ 2 ವರ್ಷ ಗಳಿಂದ ಪಾಣಾಜೆ ಗ್ರಾ.ಪಂ. ಅಧ್ಯಕ್ಷೆಯಾಗಿದ್ದಾರೆ.
ಬೆಳ್ತಂಗಡಿಯ ಕೊಯ್ಯೂರು ಪ.ಪೂ. ಕಾಲೇಜಿನ ಪ್ರಾಚಾರ್ಯ ರಾಗಿರುವ ಪಾಣಾಜೆಯ ಬಾಲಕೃಷ್ಣ ಬೇರಿಕೆ ಅವರ ಮಾರ್ಗದರ್ಶನ ದೊಂದಿಗೆ 2021-22ನೇ ಸಾಲಿನ 10ನೇ ತರಗತಿಯ ಪರೀಕ್ಷೆ ಬರೆದು ಶೇ. 54 ಅಂಕ ಗಳಿಸಿದ್ದರು. ಈ ಬಾರಿ ದ್ವಿತೀಯ ಪಿಯುಸಿಯನ್ನು ಖಾಸಗಿಯಾಗಿ ಬರೆದು 421 ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯ ನಿರೀಕ್ಷೆ ಇರಲಿಲ್ಲ. ಬಾಲ್ಯದಲ್ಲಿ ಸಿಗದಿರುವುದನ್ನು ಈಗ ಪಡೆದಿದ್ದೇನೆ. ಮುಂದೆ ಪದವಿ ಪಡೆಯುವ ಗುರಿ ಹೊಂದಿ
ದ್ದೇನೆ ಎನ್ನುತ್ತಾರೆ ಭಾರತಿ ಭಟ್.