DAKSHINA KANNADA
ತೌಕ್ತೆ ಚಂಡಮಾರುತದ ಎಫೆಕ್ಟ್ ಗೆ ಕಡಲ ತೀರದ ಸ್ಮಶಾನ ಸಮುದ್ರಪಾಲು

ಮಂಗಳೂರು, ಮೇ 15: ತೌಕ್ತೆ ಚಂಡಮಾರುತದ ಎಫೆಕ್ಟ್ ಗೆ ಕಡಲ ತೀರದ ಸ್ಮಶಾನ ಸಮುದ್ರಪಾಲಾದ ಘಟನೆ ನಡೆದಿದೆ.
ಮಂಗಳೂರು ಹೊರವಲಯದ ಸೋಮೇಶ್ವರ ಕಡಲ ತೀರದ ಸ್ಮಶಾನ ಸಮುದ್ರಪಾಲಾಗಿದ್ದು, ತೌಕ್ತೆ ಚಂಡಮಾರುತದ ಪರಿಣಾಮ ಪ್ರಕ್ಷುಬ್ಧಗೊಂಡಿರುವ ಸೋಮೇಶ್ವರ ಕಡಲ ತೀರದಲ್ಲಿ ಏಕಾಏಕಿ ರಕ್ಕಸ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ.

ನಿನ್ನೆಯ ಸಮುದ್ರದ ಅಲೆಗಳ ಅಬ್ಬರಕ್ಕೆ ಸ್ಮಶಾನದ ತಡೆಗೋಡೆ ಕುಸಿದಿದ್ದು, ಅಲೆಗಳ ಅಬ್ಬರಕ್ಕೆ ಹಿಂದೂ ರುದ್ರಭೂಮಿ ಸಮುದ್ರ ಪಾಲಾಗಿದೆ. ಸ್ಮಶಾನ ಕುಸಿತದ ವಿಡಿಯೋ ಮೊಬೈಲ್ ಕ್ಯಾಮಾರದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Video: