UDUPI
ಕೋಟ ಪಡುಕೆರೆ ಕಡಲ ಕಿನಾರೆಯಲೆಯಲ್ಲಿ ಕಡಲಾಮೆ ರಕ್ಷಣೆ
ಕೋಟ ಪಡುಕೆರೆ ಕಡಲ ಕಿನಾರೆಯಲೆಯಲ್ಲಿ ಕಡಲಾಮೆ ರಕ್ಷಣೆ
ಕೋಟ ಜುಲೈ 11: ಕೋಟ ಪಡುಕೆರೆ ಕಡಲ ಕಿನಾರೆಯಲ್ಲಿ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ಕಡಲಾಮೆಯನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟ ಘಟನೆ ನಡೆದಿದೆ.
ಮೀನುಗಾರ ಪ್ರದೀಪ್ ಅವರು, ಕಡಲಂಚಿನಲ್ಲಿ ಬಲೆಹಾಕಿ ಮಿನು ಹಿಡಿಯುವ ಸಂದರ್ಭ ಗಾಯಗೊಂಡಿರುವ ಕಡಲಾಮೆಯನ್ನು ಕಂಡಿದ್ದಾರೆ. ಆ ಕೂಡಲೇ ಅವರು ಕೋಟದ ಸಾಮಾಜಿಕ ಸೇವಾ ಸಂಸ್ಥೆಯಾದ, ಗೀತಾನಂದ ಪೌಂಡೇಶನ್ ಇದರ ಸಮಾಜ ಕಾರ್ಯ ವಿಭಾಗದ ರವಿಕಿರಣ್ ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ಸಾಮಾಜಿಕ ಕಾರ್ಯಕರ್ತ ವಿನಯಚಂದ್ರರಿಗೆ ಮಾಹಿತಿ ನೀಡಿ, ಅವರ ಮೂಲಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಎಫ್ಎಸ್ಎಲ್ ಇಂಡಿಯಾ ಇದರ ಮಂಜುನಾಥ ಇವರ ಮಾಹಿತಿ ಮೆರೆಗೆ ರಕ್ಷಿಸಲಾಗಿದೆ.
ಮಾಹಿತಿಗೆ ಸ್ಪಂದಿಸಿದ ಉಪವಲಯ ಅರಣ್ಯಾಧಿಕಾರಿ ಜೀವನ್ ದಾಸ್ ಶೆಟ್ಟಿ ಕಡಲಾಮೆ ರಕ್ಷಣಾ ಕಾರ್ಯಚರಣೆ ನೆಡೆಸಿದ್ದಾರೆ. ಆ ಬಳಿಕ ಆಮೆಯನ್ನು ಕಡಲಲ್ಲಿ ತೆರೆಗಳ ಅಬ್ಬರ ಹೆಚ್ಚಾದರಿಂದ, ಸುರಕ್ಷತೆಯ ದೃಷ್ಟಿಯಿಂದ ಹಾರಾಡಿಯ ಸುವರ್ಣ ನದಿ ಮಡಿಲಿಗೆ ಬಿಟ್ಟಿದ್ದಾರೆ.