Connect with us

LATEST NEWS

ಜಗದೀಶ್ ಶೇಣವ ಬಂಧಿಸಲು ಎಸ್ ಡಿ ಪಿ ಐ(SDPI) ಆಗ್ರಹ

ಜಗದೀಶ್ ಶೇಣವ ಬಂಧಿಸಲು ಎಸ್ ಡಿ ಪಿ ಐ(SDPI) ಆಗ್ರಹ

ಮಂಗಳೂರು ಜನವರಿ 29: ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಪುರಭವನದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಇತ್ತೀಚೆಗೆ ಸಂಘಪರಿವಾರದ ಗೂಂಡಾಗಳಿಂದ ಹತ್ಯೆಯಾದ ಬಶೀರ್ ರವರ ಹತ್ಯೆ ಪ್ರತೀಕಾರದ ಕೊಲೆ ಇದರಲ್ಲಿ ನಮಗೇನು ಚಿಂತೆಯಿಲ್ಲ ಕೊಲೆ ಮಾಡಿದವರನ್ನು ನಾವು ಬೆಂಬಲಿಸಬೇಕು ,ಈ ಬಗ್ಗೆ ನನ್ನ ಮೇಲೆ ದೂರು ದಾಖಲಾದರು ಅದನ್ನೆಲ್ಲಾ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ದು ಇದು ಕಾನೂನನ್ನು ಮೀರಿದ ಸಂವಿಧಾನ ವಿರೋಧಿ ಹೇಳಿಕೆಯಾಗಿದ್ದು ಇದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI)ದ.ಕ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ.

ಇವರ ಕೊಲೆಗಡುಕರ ಪರವಾಗಿರುವ ಹೇಳಿಕೆಯಿಂದ ಹತ್ಯೆಯ ಹಿಂದೆ ಯಾರಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತುಪಡಿಸಿದ್ದಾರೆ. ಇದು ದೀಪಕ್ ರಾವ್ ಹತ್ಯೆಯಲ್ಲಿ ಬಿಜೆಪಿಯ ಕೈವಾಡದ ಬಗ್ಗೆ ಆರೋಪಗಳ ತನಿಖೆ ನಡೆಸುತ್ತಿರುವಾಗ ತನಿಖೆಯ ದಿಕ್ಕನ್ನು ಬದಲಾಯಿಸಲು ಪ್ರಯತ್ನದ ಭಾಗವಾಗಿದೆ. ಬಶೀರ್ ಹತ್ಯೆಯ ಹಿಂದೆ ಜಗದೀಶ್ ಶೇಣವರ ಕೈವಾಡ ಎದ್ದು ಕಾಣುತ್ತಿದ್ದು ಇವರ ಮೇಲೆ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಎಸ್ಡಿಪಿಐ ಒತ್ತಾಯಿಸುತ್ತದೆ.ಇಂತಹ ಹೇಳಿಕೆ ಜಿಲ್ಲೆಯ ಶಾಂತಿಯನ್ನು ಕೆಡವಿ ಗಲಭೆಯನ್ನು ಸೃಷ್ಟಿಸುವ ಹುನ್ನಾರವಾಗಿದೆ.
ಆದುದರಿಂದ ಸರಕಾರ ಮತ್ತು ಪೊಲೀಸ್ ಇಲಾಖೆ ಕೂಡಲೇ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಎಸ್ಡಿಪಿಐ ದ.ಕ ಜಿಲ್ಲಾಧ್ಯಕ್ಷರಾದ ಹನೀಫ್ ಖಾನ್ ಕೊಡಾಜೆ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *