LATEST NEWS
ಅತ್ಯಾಚಾರ ಖಂಡಿಸಿ ಪ್ರತಿಭಟನೆ ನಡೆಸಿದವರ ಮೇಲೆ ಪೊಲೀಸ್ ಕೇಸ್ – ಕಾನೂನು ಹೋರಾಟಕ್ಕೆ ಮುಂದಾದ ಎಸ್ ಡಿಪಿಐ
ಉಡುಪಿ ಸೆಪ್ಟೆಂಬರ್ 21: ದೆಹಲಿಯಲ್ಲಿ ನಡೆದ ಸಿವಿಲ್ ಡಿಫೆನ್ಸ್ ಮಹಿಳಾ ಪೋಲಿಸ್ ಅಧಿಕಾರಿ ಸಾಬೀಯಾ ಸೈಫಿ ಯ ಅತ್ಯಾಚಾರ ಮತ್ತು ಬರ್ಬರ ಹತ್ಯೆಖಂಡಿಸಿ ಹಾಗೂ ಹತ್ಯೆಯ ಆರೋಪಿಗಳನ್ನು ತಕ್ಷಣವೇ ಪತ್ತೆಹಚ್ಚಿ ಬಂಧಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದವರ ವಿರುದ್ದ ಕೇಸ್ ದಾಖಲಿಸಿರುವ ಉಡುಪಿ ಪೊಲೀಸ್ ಇಲಾಖೆಯ ವಿರುದ್ದ ಎಸ್ ಡಿಪಿಐ ಗರಂ ಆಗಿದ್ದು, ಕೇಸ್ ಗಳ ವಿರುದ್ದ ಕಾನೂನು ಹೋರಾಟಕ್ಕೆ ಎಸ್.ಡಿ.ಪಿ.ಐ ಬದ್ಧ ಎಂದು ತಿಳಿಸಿದೆ.
ದೆಹಲಿಯಲ್ಲಿ ನಡೆದ ಸಿವಿಲ್ ಡಿಫೆನ್ಸ್ ಮಹಿಳಾ ಪೋಲಿಸ್ ಅಧಿಕಾರಿ ಸಾಬೀಯಾ ಸೈಫಿ ಯ ಅತ್ಯಾಚಾರ ಮತ್ತು ಬರ್ಬರ ಹತ್ಯೆಖಂಡಿಸಿ ಹಾಗೂ ಹತ್ಯೆಯ ಆರೋಪಿಗಳನ್ನು ತಕ್ಷಣವೇ ಪತ್ತೆಹಚ್ಚಿ ಬಂಧಿಸುವಂತೆ ದಿನಾಂಕ 14 ಸೆಪ್ಟೆಂಬರ್ 2021 ರ ಮಂಗಳವಾರ ಸೊಶೀಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆ ವತಿಯಿಂದ ಶಾಂತಿಯುತ ಪ್ರತಿಭಟನೆ ಮತ್ತು ಜಾಥವನ್ನು ಹಮ್ಮಿಕೊಂಡಿತ್ತು.
ಈ ಪ್ರತಿಭಟನೆಯ ಸಂಬಂಧ ಎಲ್ಲಾ ರೀತಿಯ ಅನುಮತಿಯಲ್ಲಿ ಪಡೆಯಲಾಗಿದೆ. ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಶಾಂತಿಯುತವಾದ ಪ್ರತಿಭಟನೆಯನ್ನು ನಡೆಸಲಾಗಿತ್ತು, ಆದರೆ ಪ್ರತಿಭಟನೆ ಮುಗಿದ ಬಳಿಕ ಉಡುಪಿ ನಗರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮತ್ತು ವೃತ್ತ ನಿರೀಕ್ಷರ ಅದೇಶದ ಮೇರೆ ಹಲವರನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಸುಮಾರು 12 ಗಂಟೆ ರಾತ್ರಿಯ ತನಕ ಕಾಯಿಸಿ ಕೇಸು ದಾಖಲಿಸಿ ಬಿಟ್ಟಿರುತ್ತಾರೆ. ಅಲ್ಲದೇ ನಮ್ಮ ಈ ಪ್ರತಿಭಟನಾ ಸಭೆಗೆ ಅತಿಥಿಗಳಾಗಿ ಭಾಗವಹಿಸಿದ ಅತಿಥಿಗಳ ಮೇಲು ಹಾಗೂ ಮಹಿಳಾ ಅತಿಥಿಗಳ ಮೇಲು ದಾಖಲಿಸಿರುತ್ತಾರೆ.
ಕಾರ್ಯಕ್ರಮಕ್ಕೆ ಅಗಮಿಸಿದ ವಾಹನಗಳನ್ನು ವಶಪಶಪಡಿಸಿಕೊಂಡು ದಂಡವಿಧಿಸುವ ಮೂಲಕ ತಾರತಮ್ಯ ನೀತಿಯನ್ನು ಮಾಡುತಿದ್ದಾರೆ. ಈ ಮೊದಲು ಕೊವೀಡ್ ಸಂದರ್ಭದಲ್ಲೇ ಧಾರ್ಮಿಕ ಹಾಗೂ ಕೆಲವು ಸಂಘಟನೆಗಳ ಕಾರ್ಯಕ್ರಮಗಳು ನಡೆದಿರುತ್ತವೆ. ಆ ಸಂದರ್ಭದಲ್ಲಿ ಯಾವುದೇ ಕೇಸು ದಾಖಲಿಸದ ಪೋಲಿಸ್ ಇಲಾಖೆ ಈಗ 35 ಕ್ಕೂ ಅಧಿಕ ಮಂದಿಯ ಮೇಲೆ ಸೆಕ್ಷನ್ 107, 109 ಮತ್ತು 112 ನ ಕೇಸು ಹಾಕಿ ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದಾರೆ.
ಈ ಆತ್ಯಾಚಾರ ಪ್ರಕರಣ ದೇಶದ ಪ್ರಜ್ಞಾವಂತ ನಾಗರಿಕರು ತಲೆತಗ್ಗಿಸುವಂತಾ ಹಿನಾ ಕೃತ್ಯವಾಗಿದ್ದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನು ಖಂಡಿಸುತ್ತಾನೆ. ಆದ್ರೆ ಉಡುಪಿಯ ನಗರ ಠಾಣೆಯ ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಮತ್ತು ವೃತ್ತ ನೀರಿಕ್ಷಕರು ಯಾರ ಒತ್ತಡಕ್ಕೆ ಮಣಿದು ಕಾರ್ಯಕ್ರಮ ಆಯೋಜಕರ ಮೇಲೆ ಕೇಸ್ ದಾಖಲಿಸಿದ್ದಾರೆ? ಸಂವಿಧಾನ ವ್ಯವಸ್ಥೆಯಲ್ಲಿ ಪ್ರತಿಭಟಿಸುವ ಹಕ್ಕು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಇದೇ. ಆದ್ರೆ ಪ್ರತಿಭಟಿಸುವ ಹಕ್ಕನ್ನು ಕಸಿಯುವ ಮೂಲಕ ಜಿಲ್ಲೆಯಲ್ಲಿ ಎಸ್ಬಿಪಿಐ ಧಮನಿಸುವ ಹಾಗೂ ದೇವ್ವದ ವಾತಾವರಣವನ್ನು ಸೃಷ್ಟಿಸಲು ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಮುಂದಾಗಿರುದನ್ನು ಎಸ್ಟಿಪಿಐ ಖಂಡಿಸುತ್ತದೆ. ಅಲ್ಲದೇ ಇಂತಹ ಪ್ರತಿಭಟಿಸುವ ಹಕ್ಕನ್ನು ಕಸಿಯುತ್ತಿರುವ ಪೋಲಿಸ್ ಇಲಾಖೆಯ ವಿರುದ್ಧ ಕಾನೂನು ಹೋರಾಟಕ್ಕೂ ಎಸ್ಬಿಪಿಐ ಬದ್ದವಾಗಿದೆ ಎಂದು ತಿಳಿಸಿದ್ದಾರೆ.