BELTHANGADI
ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂದು ಸುಳ್ಳಾರೋಪ ಮಾಡಿ ಅಮಾಯಕರ ಬಂಧನ ಖಂಡನೀಯ: ಎಸ್‌ಡಿಪಿಐ
ಮಂಗಳೂರು, ಜನವರಿ 01: ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶದ ದಿನದಂದು ಬೆಳ್ತಂಗಡಿ ತಾಲೂಕಿನ ಮತ ಎಣಿಕೆ ಕೇಂದ್ರವಾದ ಉಜಿರೆಯಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಮತ್ತು ಬೆಂಬಲಿಗರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆಂದು ಯಾವುದೇ ಸಾಕ್ಷಿಗಳಿಲ್ಲದೆ ಸುಳ್ಳಾರೋಪ ಮಾಡಿ ಅಮಾಯಕ ಯುವಕರ ಮೇಲೆ ಪ್ರಕರಣ ದಾಖಲಿಸಿ ರಾತ್ರೋ ರಾತ್ರಿ ಮನೆಗೆ ನುಗ್ಗಿ ಅಸಭ್ಯ ವರ್ತನೆಯ ಮೂಲಕ 3 ಮಂದಿಯನ್ನು ಪೋಲೀಸರು ಬಂಧಿಸಿ ನ್ಯಾಯಾಲಕ್ಕೆ ಹಾಜರು ಪಡಿಸಿದ ಕೃತ್ಯವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದಾಗ ಬೆಂಬಲಿಗರು ಪಕ್ಷದ ಪರ ಮತ್ತು ಅಭ್ಯರ್ಥಿಗಳ ಪರ ಘೋಷಣೆ ಕೂಗುವುದು ಸರ್ವೇ ಸಾಮಾನ್ಯ, ಇದನ್ನು ಸಹಿಸಲಾಗದ ಸಂಘಪರಿವಾರ ಮತ್ತು ಕೆಲವು ಕೋಮು ಮನೋಸ್ಥಿತಿಯ ಮಾಧ್ಯಮಗಳು ಎಸ್‌ಡಿಪಿಐ ಝಿಂದಾಬಾದ್ ಘೋಷಣೆಗಳನ್ನು ತಿರುಚಿಕೊಂಡು ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂಬುದಾಗಿ ಬಿಂಬಿಸಿದ್ದಾರೆ. ಆದರೆ ವೀಡಿಯೋದಲ್ಲಿ ಅಂತಹ ಯಾವುದೇ ಶಬ್ದಗಳು ಕೇಳಲು ಸಾದ್ಯವಿಲ್ಲ, ಇದು ಜಿಲ್ಲೆಯ ಶಾಂತಿಯನ್ನು ಕದಡಲು ದಿಗ್ವಿಜಯ ಟಿವಿ ವಾಹಿನಿ ಯವರು ನಡೆಸಿದ ಷಡ್ಯಂತ್ರದ ಭಾಗವಾಗಿದೆ.
ಇಂತಹ ಸಂಧರ್ಭದಲ್ಲಿ ಸೂಕ್ಷ್ಮವಾಗಿ ವೀಡಿಯೋವನ್ನು ಪರಿಗಣಿಸಿ ಪ್ರಕರಣವನ್ನು ದಾಖಲಿಸಿ ಕೊಳ್ಳಬೇಕಾಗಿದ್ದ ಪೋಲಿಸರು ರಾಜಕೀಯ ಒತ್ತಡಕ್ಕೆ ಮಣಿದು ನಡೆಯದೇ ಇದ್ದ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿ ಅಮಾಯಕ ಯುವಕರನ್ನು ಬಂಧಿಸಿ ಪೋಲಿಸ್ ವೃತ್ತಿಗೆ ಕಳಂಕ ತಂದಿದ್ದಾರೆ.
ದ.ಕ ಜಿಲ್ಲೆಯ ಉಳ್ಳಾಲವನ್ನು ಪಾಕಿಸ್ತಾನಕ್ಕೆ ಹೋಲಿಸಿದ ಕಲ್ಲಡ್ಕ ಪ್ರಭಾಕರ ಭಟ್ಟನ ಮೇಲೆ ಪ್ರಕರಣ ದಾಖಲಿಸಲು ಇಡೀ ಜಿಲ್ಲೆಯೇ ಒತ್ತಾಯಪಡಿಸಿದಾಗ ಹಿಂದು ಮುಂದು ನೋಡಿ ಮೌನ ವಹಿಸಿದ ಪೋಲಿಸ್ ಇಲಾಖೆಯು ಸಂಘಪರಿವಾರ ಸುಳ್ಳಾರೋಪ ನಡೆಸಿ ಜಿಲ್ಲೆಯ ಸಾಮರಸ್ಯವನ್ನು ಹದಗೆಡಿಸಲು ಷಡ್ಯಂತ್ರ ನಡೆಸುವಾಗ ಅಮಾಯಕರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲು ಉತ್ಸುಕತೆ ತೋರಿಸುತ್ತಿರುವುದು ಖಂಡನೀಯ ಮತ್ತು ಧ್ವಿಮುಖ ದೋರಣೆಯಾಗಿದೆ.
ಜಿಲ್ಲೆಯಲ್ಲಿ ಎಸ್‌ಡಿಪಿಐ ಪಕ್ಷವು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಭೂತಪೂರ್ವ ಸಾಧನೆಯ ಫಲಿತಾಂಶವನ್ನು ನೋಡಿ ಬಿಜೆಪಿ ಮತ್ತು ಸಂಘಪರಿವಾರ ನಿಬ್ಬೆರಗಾಗಿ ಈ ರೀತಿಯ ಹುನ್ನಾರವನ್ನು ನಡೆಸುತ್ತಿದೆ. ಆದರೆ ಇಂತಹ ಸುಳ್ಳಾರೋಪದಿಂದ ನಮ್ಮ ಸಾಧನೆಯನ್ನು ತಡೆಯಲು ಖಂಡಿತಾ ಸಾಧ್ಯವಿಲ್ಲ. ಪೋಲಿಸ್ ಇಲಾಖೆ ಈ ಬಗ್ಗೆ ದ್ವಿಮುಖ ಧೋರಣೆಯನ್ನು ಕೈ ಬಿಟ್ಟು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಅಮಾಯಕ ಯುವಕರ ಮೇಲಿನ ಪ್ರಕರಣವನ್ನು ಕೈ ಬಿಡಬೇಕು ಮತ್ತು ಬಂಧಿತ ಅಮಾಯಕ ಯುವಕರನ್ನು ಬಿಡುಗಡೆ ಗೊಳಿಸಬೇಕು.
ರಾತ್ರೋ ರಾತ್ರಿ ಮನೆಗೆ ನುಗ್ಗಿ ಅಮಾಯಕರನ್ನು ಬಂಧಿಸಿ ಕರೆದೊಯ್ದ ಬೆಳ್ತಂಗಡಿ ಪೋಲಿಸರಲ್ಲಿ ಘಟಣೆಯ ಬಗ್ಗೆ ವಿಚಾರಿಸಿದಾಗ ನಾವು ನಿಸ್ಸಾಹಯಕರು. ನೀವು ಏನಿದ್ದರೂ ಜಿಲ್ಲಾ ವರಿಷ್ಠಾದಿಕಾರಿಯವರಲ್ಲಿ ಮಾತನಾಡಬೇಕೆಂದರು, ಆದರೆ ವರೀಷ್ಠಾಧಿಕಾರಿಯವರಲ್ಲಿ ಮಾತನಾಡಿದಾಗ ಅವರು ಈ ಬಗ್ಗೆ ನಾವು ತನಿಖೆ ನಡೆಸಿದ್ದೇವೆ. ನೀವು ನ್ಯಾಯಾಲಯದಲ್ಲಿ ನೋಡಿಕೊಳ್ಳಿ ಎಂಬ ಉಡಾಫೆಯ ಉತ್ತರವನ್ನು ನೀಡಿದ್ದಾರೆ.
ಇಲ್ಲಿ ಪೋಲಿಸ್ ವರೀಷ್ಠಾಧಿಕಾರಿಯವರು ಬಿಜೆಪಿ ಮತ್ತು ಸಂಘಪರಿವಾರದ ನಾಯಕರ ಕೈ ಗೊಂಬೆಯಂತೆ ವರ್ತಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರತೀ ಸಂಧರ್ಭದಲ್ಲೂ ನ್ಯಾಯವು ತಾರತಮ್ಯ ವಾಗುತ್ತಿದೆ. ಉಜಿರೆಯಲ್ಲಿ ನಡೆದ ಘಟಣೆಯ ಹಿಂದೆ ಸಂಘಪರಿವಾರದ ಷಡ್ಯಂತ್ರ ಗೋಚರವಾಗುತ್ತಿದೆ. ಇಂತಹ ಸಂಧರ್ಭಗಳಲ್ಲಿ ಮಾಧ್ಯಮಗಳನ್ನು ಬಳಸಿಕೊಂಡು ಜನರನ್ನು ದಿಕ್ಕು ತಪ್ಪಿಸುವ ಕೆಲಸಗಳು ನಡೆಯುತ್ತಿದೆ. ಇದರ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಹಾಗೂ ಸತ್ಯಾ ಸತ್ಯತೆ ಜನರ ಮುಂದಿಡಬೇಕು. ಬಂಧಿಸಿದ ಅಮಾಯಕರನ್ನು ಕೂಡಲೇ ಬಿಡುಗಡೆಗೊಳಿಸಬೇಕು.
ಬಿಜೆಪಿ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯುವ ಪೋಲಿಸ್ ಪರೀಷ್ಠಾಧಿಕಾರಿಗಳ ಕ್ರಮದ ಬಗ್ಗೆ ಉನ್ನತ ತನಿಖೆ ನಡೆಸಬೇಕು. ಇಲ್ಲದಿದ್ದಲ್ಲಿ ಮೂರು ದಿನಗಳಲ್ಲಿ ಪೋಲಿಸ್ ವರೀಷ್ಠಾಧಿಕಾರಿಗಳ ಕಛೇರಿಗೆ ಮಾರ್ಚ್ ನಡೆಸಿ ಮುತ್ತಿಗೆ ಹಾಕಲಾಗುವುದೆಂದು ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಎಚ್ಚರಿಸಿದ್ದಾರೆ.
Facebook Comments
You may like
-
ಧಾರ್ಮಿಕ ಕೇಂದ್ರಗಳಲ್ಲಿ ದುಷ್ಕರ್ಮಿಗಳ ವಿಕೃತಿ – ಪೊಲೀಸ್ ಆಯುಕ್ತರಿಂದ ಪರಿಶೀಲನೆ
-
ಕೊಣಾಜೆ ಮುಲಾರ ಗೋಪಾಲಕೃಷ್ಣ ಭಜನಾ ಮಂದಿರ ಭಗವಾ ಧ್ವಜದ ಮೇಲೆ ವಿಕೃತಿ ಮೆರೆದ ದುಷ್ಕರ್ಮಿಗಳು
-
ಗೋ ರಕ್ಷಕರ ಮೇಲಿನ ಕೇಸ್ ಹಿಂಪಡೆಯಲು ಚಿಂತನೆ – ಸಚಿವ ಪ್ರಭು ಚವ್ಹಾಣ್
-
ಮತ್ತೆ ಮುಂದುವರೆದ ಪುಂಡಾಟಿಕೆ – ಕೊರಗಜ್ಜನ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್…!!
-
ಉಳ್ಳಾಲ ಮಹಿಳೆಗೆ ಅತ್ಯಾಚಾರ ಕಿರುಕುಳ ಆರೋಪ – ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ :ಎಸ್‌ಡಿಪಿಐ
-
ಕೇರಳ ಭೀಕರ ಅತ್ಯಾಚಾರ ಪ್ರಕರಣ ಬಯಲು 17ರ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ 38 ಮಂದಿ
You must be logged in to post a comment Login