Connect with us

DAKSHINA KANNADA

ಅರುಣ್ ಪುತ್ತಿಲ ಬಂಧನಕ್ಕೆ SDPI ಒತ್ತಾಯ

ಪುತ್ತೂರು,ಸೆಪ್ಟಂಬರ್ 14:ಎರಡು ಸಮುದಾಯಗಳನ್ನು ಎತ್ತಿಕಟ್ಟಿ ಕೋಮು ಗಲಭೆಗೆ ಯತ್ನಿಸುತ್ತಿರುವ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರನ್ನು ಬಂಧಿಸಬೇಕೆಂದು ಎಸ್.ಡಿ.ಪಿ.ಐ ಒತ್ತಾಯಿಸಿದೆ.ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ದಕ್ಷಣಕನ್ನಡ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಹಿಂದೂ ಸಮಾವೇಶಗಳಲ್ಲಿ ಅರುಣ್ ಪುತ್ತಿಲ ಸಮಾಜವನ್ನು ಒಡೆಯುಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಪುತ್ತೂರಿನಲ್ಲಿ ಇತ್ತೀಚೆಗೆ ನಡೆದ ಪ್ರೇಮ ಪ್ರಕರಣದಲ್ಲಿ ಎಸ್.ಡಿ.ಪಿ.ಐ ಕೈವಾಡವಿದೆ ಎಂದು ಸುಳ್ಳು ಸುದ್ಧಿಯನ್ನು ಪುತ್ತಿಲ ಹರಡುತ್ತಿದ್ದಾರೆ. ಚುನಾವಣೆ ಹತ್ತಿರವಾದಾಗ ಇಂಥಹ ನಾಟಕಗಳನ್ನು ಹಿಂದೂ ಸಂಘಟನೆಗಳು ನಡೆಸುತ್ತಿದೆ. ಪಡುಮಲೆಯಲ್ಲಿ ಕೋಟಿ-ಚೆನ್ನಯ್ಯರ ತಾಯಿ ದೇಯಿ ಬೈದೆದಿ ಪುತ್ಥಳಿಯನ್ನು ಅವಮಾನಮಾಡಿದ್ದನ್ನು ಪಕ್ಷ ಖಂಡಿಸುತ್ತದೆ. ಆರೋಪಿಗೆ ಹಾಗೂ ಆತನಿಗೆ ಸಹಕರಿಸಿದವರಿಗೆ ತಕ್ಕ ಶಿಕ್ಷೆಯನ್ನು ವಿಧಿಸಬೇಕೆಂದೂ ಇದೇ ಸಂದರ್ಭದಲ್ಲಿ ಒತ್ತಾಯಿಸಿದ ಶಾಫಿ ಬೆಳ್ಳಾರೆ ಈ ವಿಚಾರದಲ್ಲೂ ಅರುಣ್ ಪುತ್ತಿಲ ಎಸ್.ಡಿ.ಪಿ.ಐ ಹಾಗೂ ಅಂಗಸಂಸ್ಥೆಗಳನ್ನು ದೂರುತ್ತಿರುವುದು ಸಮಾಜದಲ್ಲಿ ಬಿರುಕು ಮೂಡಿಸುವ ಯತ್ನ ಎಂದರು. ಸಮಾಜದ ಸ್ವಾಸ್ಥ್ಯಕ್ಕೆ ತೊಡಕಾಗಿರುವ ಅರುಣ್ ಪುತ್ತಿಲರನ್ನು ಪೋಲೀಸರು ಮುಂಜಾಗೃತಾ ಕ್ರಮವಾಗಿ ಬಂಧಿಸಬೇಕೆಂದು ಅವರು ಇದೇ ಸಂದರ್ಭದಲ್ಲಿ ಪೋಲೀಸ್ ಇಲಾಖೆಯನ್ನು ಒತ್ತಾಯಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *