DAKSHINA KANNADA
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಎಸ್ ಡಿಪಿಐ ಅಭ್ಯರ್ಥಿಯಾಗಿ ಶಾಫಿ ಬೆಳ್ಳಾರೆ

ಮಂಗಳೂರು ಫೆಬ್ರವರಿ 13: ರಾಜ್ಯ ವಿಧಾನಸಭಾ ಚುನಾವಣೆ ಆಗಮಿಸುತ್ತಿದ್ದಂತೆ ವಿವಿಧ ಪಕ್ಷಗಳು ಚುನಾವಣಾ ತಯಾರಿಯಲ್ಲಿ ತೊಡಗಿಕೊಂಡಿದ್ದು , ಇದೀಗ ಎಸ್ ಡಿಪಿಐ ಪಕ್ಷ ದಕ್ಷಿಣ ಕಾಂಗ್ರೆಸ್ ಜಿಲ್ಲೆಯ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸಿದೆ.
ಪುತ್ತೂರಿನಲ್ಲಿ ನಡೆದ ಎಸ್ ಡಿ ಪಿ ಐ ಕಾರ್ಯಕರ್ತರ ಸಮಾವೇಶ ದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರ ದಿಂದ ಶಾಫಿ ಬೆಳ್ಳಾರೆ ಅಭ್ಯಾರ್ಥಿಯಾಗಿ ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಖಾನ್ ಘೋಷಣೆ ಮಾಡಿದ್ದಾರೆ.

ಎಸ್ ಡಿ ಪಿ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಅವರನ್ನು ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ಎನ್ ಐಎ ಬಂಧಿಸಿದೆ. ಸದ್ಯ NIA ಬಂಧನದಲ್ಲಿರುವ ಶಾಫಿ ಬೆಳ್ಳಾರೆ, ಜೈಲಿನಿಂದಲೇ ಚುನಾವಣೆಗೆ ಸ್ಪರ್ದಿಸಲಿದ್ದಾರೆ. ಆರೋಪಿ ಶಾಫಿ ಬೆಳ್ಳಾರೆಯನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಮೂಲಕ ಭಾರೀ ವಿವಾದವನ್ನು ಎಸ್ ಡಿಪಿಐ ಸೃಷ್ಠಿಸಿದ್ದು, ಪ್ರವೀಣ ನೆಟ್ಟಾರ್ ಪ್ರಕರಣದಲ್ಲಿ ಶಾಫಿ ಬೆಳ್ಳಾರೆ ಮೇಲೆ ಎನ್ ಐಎ ಸಾಕ್ಷಾಧಾರ ಗಳನ್ನ ಮುಂದಿಟ್ಟು ಬಂಧಿಸಿತ್ತು.