Connect with us

LATEST NEWS

ಸ್ಕೂಟಿ ನಂಬರ್ ಪ್ಲೇಟ್ ನಲ್ಲಿ SEX ಪದ…. ಇದರ ಸಹವಾಸವೇ ಸಾಕೆಂದು ಸ್ಕೂಟಿ ಮೂಲೆಗಿಟ್ಟ ಯುವತಿ

ನವದೆಹಲಿ: ಸ್ಕೂಟಿಯ ನಂಬರ್ ಪ್ಲೇಟ್ ನಿಂದಾಗ ವಿದ್ಯಾರ್ಥಿನಿಯೊಬ್ಬಳು ಮುಜುಗರಕ್ಕೊಳಗಾಗಿ ಇದೀಗ ಸ್ಕೂಟಿ ಓಡಿಸೋದನ್ನೇ ನಿಲ್ಲಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ನಂಬರ್ ಪ್ಲೇಟ್ ನಲ್ಲಿರುವ SEX ಪದಗಳಿಂದಾಗಿ ಈ ಸಮಸ್ಯೆ ಆರಂಭವಾಗಿದೆ.


ಪಶ್ಚಿಮ ದೆಹಲಿಯಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿನಿಗೆ ಆಕೆಯ ತಂದೆ ಸ್ಕೂಟಿ ಉಡುಗೊರೆ ನೀಡಿದ್ದಾರೆ. ನಂತರ ಆರ್ ಟಿಓ ರೆಜಿಸ್ಟ್ರೇಷನ್ ಆದ ನಂತರ ಸ್ಕೂಟಿಗೆ ಬಂದ ನಂಬರ್ ಮಾತ್ರ ವಿಧ್ಯಾರ್ಥಿನಿಗೆ ಶಾಕ್ ನೀಡಿತ್ತು. RTO ನಿಂದ ಪಡೆದ ಸಂಖ್ಯೆಯು ಸಂಖ್ಯೆಗಳ ಮಧ್ಯದಲ್ಲಿ S.E.X ಅಕ್ಷರಮಾಲೆಯಾಗಿತ್ತು. DL3SEX**** ಎಂಬ ಸಂಖ್ಯೆಯನ್ನು ಆರ್‌ಟಿಒ ನೀಡಿರುವುದು.ಸ್ಕೂಟಿ ಸಂಖ್ಯೆಯಲ್ಲಿ ಡಿಎಲ್‌ ಎಂಬ ಎರಡು ಇಂಗ್ಲಿಷ್‌ ಅಕ್ಷರಗಳ ಬಳಿಕ ಮುಂದಿನ ವರ್ಣಮಾಲೆಯಲ್ಲಿ ಸೆಕ್ಸ್‌ ಎಂದು ಬಂದಿದೆ. ಹೊರಗಡೆ ಸ್ಕೂಟಿ ತೆಗೆದುಕೊಂಡು ಹೋದಾಗ ಗೆಲವರು ಈಕೆಯನ್ನು ಗೇಲಿ ಮಾಡುತ್ತಾರಂತೆ. ಹೀಗಾಗಿ ಸ್ಕೂಟಿ ಸಹವಾಹಸವೇ ಬೇಡ ಎಂಬ ನಿರ್ಧಾರಕ್ಕೆ ವಿದ್ಯಾರ್ಥಿನಿ ಬಂದಿದ್ದಾಳೆ.


ನಂತರ ನಂಬರ್ ಬದಲಿಸಲು ಮನೆಯವರು ಪ್ರಯತ್ನಿಸಿದ್ದಾರೆ. ಆದರೆ ದೆಹಲಿ ಸಾರಿಗೆ ಆಯುಕ್ತ ಕೆಕೆ ದಹಿಯಾ ಮಾತನಾಡಿ, “ಒಮ್ಮೆ ವಾಹನದ ಸಂಖ್ಯೆಯನ್ನು ನಿಗದಿಪಡಿಸಿದ ನಂತರ, ಅದನ್ನು ಬದಲಾಯಿಸಲು ಯಾವುದೇ ಅವಕಾಶವಿಲ್ಲ” ಎಂದು ತಿಳಿಸಿದ್ದಾರೆ.
ಸದ್ಯ ಈಕೆಯ ಸಂತಸಕ್ಕೆ ಕಾರಣವಾಗಿದ್ದ ಸ್ಕೂಟಿ ಮುಜುಗರಕ್ಕೆ ಕಾರಣವಾಗಿರುವುದು ವಿಪರ್ಯಾಸ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *