DAKSHINA KANNADA
ಪೆಲ್ತಡ್ಕ – ಸ್ಕೂಟಿ ಹಾಗೂ ಕಾರಿನ ನಡುವೆ ಅಪಘಾತ – ಸ್ಕೂಟಿ ಸವಾರ ಸಾವು

ಸುಳ್ಯ ಮೇ 23: ಸ್ಕೂಟಿ ಮತ್ತು ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರ ಮೃತಪಟ್ಟಿರುವ ಘಟನೆ ಅರಂತೋಡು ಮುಖ್ಯ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ಕುಕ್ಕಜಡ್ಕದ ನವೀನ್ ಸಂಕೇಶ ಎಂದು ಗುರುತಿಸಲಾಗಿದೆ. ಇವರು ಮುತ್ತೋಟು ಫೈನಾನ್ಸ್ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರು ಕಲ್ಲುಗುಂಡಿಯಿಂದ ಸುಳ್ಯಕ್ಕೆ ಹೋಗುತ್ತಿರುವ ಸಂದರ್ಭ ಸುಬ್ರಹ್ಮಣ್ಯದಿಂದ ಮಂಡ್ಯ ಕಡೆಗೆ ತೆರಳುತಿದ್ದ ಐ20 ಕಾರು ಗುದ್ದಿದೆ. ಇನ್ನು ಅಪಘಾತದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟು ಸ್ಕೂಟಿ ಸವಾರ ನವೀನ್ ಸಂಕೇಶ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
