LATEST NEWS
ತೊಕ್ಕೊಟ್ಟು – ಜೀಪ್ ಚಾಲಕನ ಧಾವಂತಕ್ಕೆ ಸ್ಕೂಟರ್ ಸವಾರ ಬಲಿ
ಮಂಗಳೂರು ಡಿಸೆಂಬರ್ 15: ಜೀಪ್ ಚಾಲಕನ ಧಾವಂತಕ್ಕೆ ಸ್ಕೂಟರ್ ಸವಾರನೊಬ್ಬ ಸಾವನಪ್ಪಿದ ಘಟನೆ ಶನಿವಾರ ತಡರಾತ್ರಿ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯ ನೇತಾಜಿ ಆಸ್ಪತ್ರೆ ಸಮೀಪದ ಪ್ರಶಾಂತ್ ವೈನ್ಸ್ ಎದುರುಗಡೆ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ಉಳ್ಳಾಲ ತಾಲೂಕಿನ ಎಲಿಯಾರ್ ಪದವು ಸಂಪಿಗೆದಡಿ ನಿವಾಸಿ ಅರುಣ್ ಪೂಜಾರಿ(43) ಎಂದು ಗುರುತಿಸಲಾಗಿದೆ. ಕಾಪಿಕಾಡ್‌ನ ವೈನ್ & ಡೈನ್ ಬಾರ್ ಆಂಡ್ ರೆಸ್ಟೋರೆಂಟಲ್ಲಿ ವೈಟರ್ ಕೆಲಸ ನಿರ್ವಹಿಸುತ್ತಿದ್ದ ಅರುಣ್ ಅವರು ಶನಿವಾರ ರಾತ್ರಿ ಕೆಲಸ ಮುಗಿಸಿ ತನ್ನ ಆಕ್ಟಿವ ಸ್ಕೂಟರಲ್ಲಿ ಮನೆಗೆ ಹಿಂತಿರುಗುವಾಗ ಜಿಪ್ಸಿ ಜೀಪ್ ಮುಖಾಮುಖಿ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಜೀಪ್ ಚಾಲಕನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು, ಪ್ರಕರಣ ದಾಖಲಿಸಿದ್ದಾರೆ. ಮೃತ ಅರುಣ್ ಅವರು ತಂದೆ, ತಾಯಿ ಪತ್ನಿ, ಇಬ್ಬರು ಗಂಡು ಮಕ್ಕಳನ್ನ ಅಗಲಿದ್ದಾರೆ. ಅರುಣ್ ಜತೆ ವೈನ್ & ಡೈನ್ ನ ಸ್ವಚ್ಚತಾ ಸಿಬ್ಬಂದಿ ಹೇಮಾವತಿ ಎಂಬ ಮಹಿಳೆ ಸಹ ಸವಾರರಾಗಿದ್ದರು. ಘಟನೆಯಿಂದ ಆಕೆಯೂ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅರುಣ್ ಅವರ ತಂದೆ- ತಾಯಿ ಇಬ್ಬರೂ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು ಅವರನ್ನು ಅರುಣ್ ಅವರೇ ಆರೈಕೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.