LATEST NEWS
ಶಾಲಾ ಆರಂಭಕ್ಕೂ ಮುನ್ನವೆ ಜಿಲ್ಲೆಯಲ್ಲಿ ಖಾಸಗಿ ಶಾಲೆಗಳಿಂದ ಫೀಸ್ ಪಾವತಿಸಲು ಮೆಸೇಜ್

ಶಾಲಾ ಆರಂಭಕ್ಕೂ ಮುನ್ನವೆ ಜಿಲ್ಲೆಯಲ್ಲಿ ಖಾಸಗಿ ಶಾಲೆಗಳಿಂದ ಫೀಸ್ ಪಾವತಿಸಲು ಮೆಸೇಜ್
ಪುತ್ತೂರು ಮೇ.22: ಲಾಕ್ ಡೌನ್ ನ ನಡುವೆ ಶಾಲಾ ಆರಂಭಕ್ಕೆ ಯಾವುದೇ ತರಾತುರಿ ಇಲ್ಲ ಎಂದು ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ ನಡುವೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಖಾಸಗಿ ಶಾಲೆಗಳು ಶಾಲಾ ಶುಲ್ಕ ಪಾವತಿಸುವಂತೆ ಒತ್ತಡ ಹೇರಲು ಆರಂಭಿಸಿದ್ದಾರೆ.
ಕೊರೊನಾ ನಡುವೆ ಶಾಲಾ ಚಟುವಟಿಕೆ ಆರಂಭ ಇನ್ನು ಅತಂತ್ರದಲ್ಲೇ ಇದ್ದು, ರಾಜ್ಯ ಸರಕಾರವಾಗಲೀ ಕೇಂದ್ರ ಸರಕಾರವಾಗಲೀ ಶಾಲಾ ಪ್ರಾರಂಭದ ಬಗ್ಗೆ ಇಲ್ಲಿಯವರೆಗೆ ಯಾವುದೇ ರೀತಿ ನಿರ್ಧಾರ ಕೈಗೊಂಡಿಲ್ಲ. ಆದರೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿ ಸ್ಕೂಲ್ ಆರಂಭದ ದಿನಾಂಕ ಪ್ರಕಟವಾಗುವ ಮೊದಲೇ ಫೀಸ್ ಕಲೆಕ್ಷನ್ ಸ್ಟಾರ್ಟ್ ಮಾಡಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಖಾಸಗಿ ಶಾಲೆಗಳಿಂದ ಫೀಸ್ ಕಟ್ಟುವಂತೆ ಮೆಸೇಜ್ ಮೂಲಕ ಸೂಚನೆ ನೀಡಿದ್ದಾರೆ. ಜಿಲ್ಲೆಯ ಕೆಲವು ಖಾಸಗಿ ಶಾಲೆಗಳು ಈಗಾಗಲೇ ಫೀಸ್ ನ್ನು ಅನ್ ಲೈನ್ ಮೂಲಕ ಕಟ್ಟುವಂತೆ ಸಂದೇಶಗಳು ಬರಲಾರಂಭಿಸಿದ್ದು, ಶಿಕ್ಷಣ ಇಲಾಖೆಯಿಂದ ಸೂಚನೆ ಬರುವ ಮೊದಲೇ ಖಾಸಗಿ ಶಾಲೆಗಳ ಒತ್ತಡಕ್ಕೆ ಮಕ್ಕಳ ಪೋಷಕರು ಗೊಂದಲದಲ್ಲಿದ್ದಾರೆ.