BELTHANGADI
ವಿಷಯುಕ್ತ ನೀರು ಸೇವಿಸಿ 8 ಮಕ್ಕಳು ಅಸ್ವಸ್ಥ

ವಿಷಯುಕ್ತ ನೀರು ಸೇವಿಸಿ 8 ಮಕ್ಕಳು ಅಸ್ವಸ್ಥ
ಬೆಳ್ತಂಗಡಿ ಡಿಸೆಂಬರ್ 2: ನೀರು ಕುಡಿದ 8 ಮಕ್ಕಳು ಅಸ್ವಸ್ಥರಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಪೆರ್ಲ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಕಿಡಿಗೇಡಿಗಳು ಕುಡಿಯುವ ನೀರಿನ ಬಾವಿಗೆ ವಿಷ ಹಾಕಿರುವ ಶಂಕೆ ವ್ಯಕ್ತವಾಗಿದ್ದು, ತೀವ್ರ ಅಸ್ವಸ್ಥರಾದ ನಾಲ್ಕು ವಿದ್ಯಾರ್ಥಿಗಳನ್ನು ಮಂಗಳೂರಿನ ಜಿಲ್ಲಾ ವೆನ್ ಲಾಕ್ ಆಸ್ಪತ್ರೆ ಮತ್ತು ಉಳಿದ ವಿದ್ಯಾರ್ಥಿಗಳನ್ನು ಬೆಳ್ತಂಗಡಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಕ್ಕಳು ಶಾಲಾ ತರಕಾರಿ ತೋಟಕ್ಕೆ ಬಾವಿಯಿಂದ ಪಂಪ್ ನಲ್ಲಿ ಗಿಡಗಳಿಗೆ ನೀರು ಸಿಂಪಡಿಸುವ ಸಮಯದಲ್ಲಿ ಮಕ್ಕಳು ನೀರನ್ನು ಕುಡಿದಿದ್ದರು. ಈ ಸಮಯದಲ್ಲಿ ಮಕ್ಕಳಿಗೆ ಹೊಟ್ಟೆ ನೋವು ಕಾಣಿಸಿಕೊಂಡಾಗ ಮುಖ್ಯ ಶಿಕ್ಷಕಿಯವರ ಗಮನಕ್ಕೆ ತಂದಿದ್ದರು.

ಬಾವಿ ಪಕ್ಕ ರಬ್ಬರ್ ಗೆ ಬಳಸುವ ಆಸಿಡ್ ನ ಕ್ಯಾನ್ ಕೂಡ ಪತ್ತೆಯಾಗಿದ್ದು ನೀರನ್ನು ಪ್ರಯೋಗಾಲಯ ಕ್ಕೆ ಕಳುಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೆತ್ತಿಕೊಂಡಿದ್ದಾರೆ.