ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಭಕ್ತರ ಎಡೆಸ್ನಾನ

ಮಂಗಳೂರು ನವೆಂಬರ್ 30: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಚಂಪಾಷಷ್ಠಿ ಮಹೋತ್ಸವ ಆರಂಭಗೊಂಡಿದೆ. ಇಂದಿನಿಂದ ಮೂರು ದಿನಗಳ ಕಾಲ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಭಕ್ತರ ವಿಶಿಷ್ಟ ಸೇವೆಯಾದ ಎಡೆ ಮಡೆಸ್ನಾನ ನಡೆಯಲಿದೆ.

ಕ್ಷೇತ್ರದಲ್ಲಿ ಆಚರಣೆಯಲ್ಲಿದ್ದ ಬ್ರಾಹ್ಮಣರು ಎಂಚಲು ಮಾಡಿದ ಎಲೆಯಲ್ಲಿ ಹೊರಳಾಡುವ ಮಡೆ ಮಡೆಸ್ನಾನಕ್ಕೆ ಸುಪ್ರೀಂಕೋರ್ಟ್ ನಿಷೇಧ ಹೇರಿದ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಇದೇ ಸೇವೆಯನ್ನು ಭಕ್ತಾಧಿಗಳು ತಮ್ಮ ಇಚ್ಛಾನುಸಾರ ನಡೆಸಿಕೊಂಡು ಬರುತ್ತಿದ್ದಾರೆ.

ದೇವರ ಪ್ರಸಾದವನ್ನು ದೇವಸ್ಥಾನದ ಪ್ರಾಂಗಣದಲ್ಲಿ ಬಡಿಸಿ ಅದನ್ನು ಗೋವಿಗೆ ಸಮರ್ಪಿಸಿದ ಬಳಿಕ ಆ ಎಲೆ ಮೇಲೆ ಭಕ್ತಾಧಿಗಳು ಉರುಳು ಸೇವೆ ನಡೆಸುದಕ್ಕೆ ಎಡೆ ಮಡೆಸ್ನಾನ ಎನ್ನಲಾಗುತ್ತದೆ.

ಇಂದು ಚೌತಿ, ನಾಳೆ ಪಂಚಮಿ ಹಾಗೂ ನಾಡಿದ್ದು ಷಷ್ಠಿಯ ದಿನ ಈ ಸೇವೆ ನಡೆಯಲಿದೆ. ಮೂರು ದಿನವೂ ಕ್ರಮವಾಗಿ ಹೂವಿನ ತೇರು, ಪಂಚಮಿ ರಥೋತ್ಸವ ಹಾಗೂ ಚಂಪಾಷಷ್ಠಿ ಮಹಾರಥೋತ್ಸವ ಕ್ಷೇತ್ರದಲ್ಲಿ ನಡೆಯಲಿದೆ.

Facebook Comments

comments