KARNATAKA
ಏನೇ ಆದರೂ ನಾನು ಕನ್ನಡ ಮಾತನಾಡಲ್ಲ – ಎಸ್ ಬಿಐ ಬ್ಯಾಂಕ್ ಸಿಬ್ಬಂದಿಯ ದರ್ಪ

ಬೆಂಗಳೂರು ಮೇ 20: ಎಸ್ ಬಿಐ ಬ್ಯಾಂಕ್ ಸಿಬ್ಬಂದಿಯೊಬ್ಬರು ಗ್ರಾಹಕರಿಗೆ ನಾನು ಕನ್ನಡ ಮಾತನಾಡಲ್ಲ ಎಂದು ದರ್ಪ ತೋರಿಸಿದ ಘಟನೆ ಸರ್ಜಾಪುರದ ಎಸ್‌ಬಿಐ ಬ್ಯಾಂಕ್ ನಲ್ಲಿ ನಡೆದಿದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಜಾಪುರದ ಎಸ್‌ಬಿಐ ಬ್ಯಾಂಕ್‌ಗೆ ಕೆಲಸದ ನಿಮಿತ್ತ ಗ್ರಾಹಕ ಹೋದಾಗ ಕನ್ನಡ ಮಾತನಾಡುವಂತೆ ಕೇಳಿದ್ದಾರೆ. ಆದರೆ ಕನ್ನಡ ಮಾತನಾಡಲು ಒಪ್ಪದ ಮಹಿಳಾ ಮ್ಯಾನೇಜರ್ ಗ್ರಾಹಕನಿಗೆ ಹಿಂದಿಯಲ್ಲಿ ಮಾತನಾಡುವಂತೆ ಅವಾಜ್ ಹಾಕಿದ್ದು, ಇದು ಭಾರತ ಬರೀ ಕರ್ನಾಟಕ ಮಾತ್ರ ಅಲ್ಲ. ನಾನು ಯಾವತ್ತೂ ಕನ್ನಡವನ್ನೇ ಮಾತಾಡಲ್ಲ. ಏನೇ ಆದರೂ ಅಂತ ಹೇಳುವ ಮೂಲಕ ಕರ್ನಾಟಕದಲ್ಲಿ ಮತ್ತೆ ಕನ್ನಡಿಗರನ್ನ ಕೆರಳಿಸುವಂತ ಹೇಳಿಕೆ ಕೊಟ್ಟು, ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Why is a Kannadiga supposed to learn Hindi for bank transactions in his own land. What sort imperialism is this? What sort of democracy and freedom is this? pic.twitter.com/ykymyr2pH2
— ಅಭಿಷೇಕ್ | Abhishek (ಕನ್ನಡ ದೇಶ ಗೆಲ್ಗೆ) (@abhispake) May 20, 2025