LATEST NEWS
ನೇಪಾಳ -ಶೌರ್ಯ ಏರ್ ಲೈನ್ಸ್ ವಿಮಾನ ಪತನ – 18 ಮಂದಿ ಸಾವು

ನೇಪಾಳ ಜುಲೈ 24: ಶೌರ್ಯ ಏರ್ ಲೈನ್ಸ್ ಗೆ ಸೇರಿದ ವಿಮಾನವೊಂದು ಪತನವಾದ ಘಟನೆ ನೇಪಾಳದ ಕಠ್ಮಂಡುವಿನ ತ್ರಿಭುವನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ನೇಪಾಳದ ಕಠ್ಮಂಡುವಿನ ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕಾಫ್ ವೇಳೆ ಸೌರ್ಯ ಏರ್‌ಲೈನ್ಸ್ ವಿಮಾನ 9N-AME (CRJ 200) ಪತನಗೊಂಡಿದೆ.
ವಿಮಾನದಲ್ಲಿದ್ದ 19 ಮಂದಿ ಪೈಕಿ 18 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 13 ಜನರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಟೇಕ್‌ಆಫ್ ವೇಳೆ ಕ್ಯಾಬಿನ್ ಸಿಬ್ಬಂದಿ ಸೇರಿ ವಿಮಾನದಲ್ಲಿ 19 ಜನರಿದ್ದರು ಎಂದು ತಿಳಿದುಬಂದಿದೆ. ಬೆಳಿಗ್ಗೆ 11 ಗಂಟೆ ಸುಮಾರಿಗೆ ವಿಮಾನ ಪೋಖರಾಗೆ ತೆರಳುತ್ತಿತ್ತು, ಈ ವೇಳೆ ಅಪಘಾತ ಸಂಭವಿಸಿದೆ. ಸ್ಥಳದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಮಾನವು ರನ್‌ವೇಯ ದಕ್ಷಿಣದ ತುದಿಯಿಂದ ಟೇಕಾಫ್ ಆಗುತ್ತಿದ್ದಾಗ, ರೆಕ್ಕೆಯ ತುದಿಯು ನೆಲಕ್ಕೆ ಅಪ್ಪಳಿಸುವುದರೊಂದಿಗೆ ಇದ್ದಕ್ಕಿದ್ದಂತೆ ಪಲ್ಟಿಯಾಯಿತು. ತಕ್ಷಣವೇ ಬೆಂಕಿ ಹೊತ್ತಿಕೊಂಡ ವಿಮಾನವು ನಂತರ ರನ್‌ವೇಯ ಪೂರ್ವ ಭಾಗದಲ್ಲಿರುವ ಕಮರಿಗೆ ಬಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.