Connect with us

    LATEST NEWS

    ತಬ್ಲಿಘಿ ಜಮಾತ್‌ನ ನಿಷೇಧಿಸಿದ ಸೌದಿ ಅರೇಬಿಯಾ!

    ದೆಹಲಿ, ಡಿಸೆಂಬರ್ 11: ಸುನ್ನಿ ಇಸ್ಲಾಮಿಕ್ ಸಂಘಟನೆ ತಬ್ಲಿಘಿ ಜಮಾತ್‌ ಅನ್ನು ಸೌದಿ ಅರೇಬಿಯಾ ನಿಷೇಧಿಸಿದ್ದು, ‘ಈ ಸಂಘಟನೆಯು ಭಯೋತ್ಪಾದನೆ ಬಾಗಿಲುಗಳಲ್ಲಿ ಒಂದು’ ಎಂದು ಕರೆದಿದೆ.

    ಮಸೀದಿಗಳಲ್ಲಿ ಪ್ರವಚನ ಹೇಳುವ ಮಂದಿಗೆ, ಮುಂದಿನ ಶುಕ್ರವಾರದಂದು ತಬ್ಲಿಘಿ ಜಮಾತ್‌ ವಿರುದ್ಧ ಜನರಿಗೆ ಎಚ್ಚರಿಕೆ ನೀಡಲು ಸೂಚಿಸಲಾಗಿದೆ ಎಂದು ಸೌದಿ ಅರೇಬಿಯಾದ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿದೆ.

    “ಈ ಸಮೂಹವು ಹಾದಿ ತಪ್ಪಿಸುವ ಘೋಷಣೆಗಳು, ದಾರಿ ತಪ್ಪಿಸುವ ನಡೆಗಳು ಭಯೋತ್ಪಾದನೆಗೆ ಪ್ರವೇಶ ದ್ವಾರಗಳಾಗಿವೆ, ಅವರು ಏನೇ ಹೇಳಿಕೊಂಡರೂ ಅಷ್ಟೇ; ಅವರು ಮಾಡುತ್ತಿರುವ ದೊಡ್ಡ ತಪ್ಪುಗಳನ್ನು ಉಲ್ಲೇಖಿಸಿ. ಅವರಿಂದ ಸಮಾಜಕ್ಕೆ ಆಗಲಿರುವ ಅಪಾಯಗಳ ಬಗ್ಗೆ ವಿವರಿಸಿ; ತಬ್ಲಿಘಿ ಹಾಗೂ ದಾ’ವಾಹ್ ಸೇರಿದಂತೆ ಕೆಲ ಗುಂಪುಗಳನ್ನು ಸೌದಿ ಅರೇಬಿಯಾದಲ್ಲಿ ನಿಷೇಧಿಸಲಾಗಿದೆ,” ಎಂದು ಸಚಿವಾಲಯ ತಿಳಿಸಿದೆ.

    https://twitter.com/Saudi_MoiaEN/status/1467846537418059776?ref_src=twsrc%5Etfw%7Ctwcamp%5Etweetembed%7Ctwterm%5E1467846537418059776%7Ctwgr%5E%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fnews%3Fmode%3Dpwaaction%3Dclick

    ಭಾರತದಲ್ಲಿ 1926ರಲ್ಲಿ ಹುಟ್ಟುಕೊಂಡ ತಬ್ಲಿಘಿ ಜಮಾತ್‌ ಒಂದು ಸುನ್ನಿ ಇಸ್ಲಾಮಿಕ್ ಅಭಿಯಾನವಾಗಿದ್ದು, ಜಗತ್ತಿನಾದ್ಯಂತ ಇರುವ ಮುಸ್ಲಿಮರಿಗೆ ಇಸ್ಲಾಂನ ಕಟ್ಟಾ ಆಚರಣೆಗಳಿಗೆ ಹಿಂದಿರುಗುವಂತೆ ಕೋರುತ್ತಾ ಬಂದಿದೆ. ಜಮಾತ್‌ನ ಸದಸ್ಯರು ವಸ್ತ್ರಧಾರಣೆ, ವೈಯಕ್ತಿಕ ನಡವಳಿ ಹಾಗೂ ಸಂಪ್ರದಾಯಗಳ ವಿಚಾರದಲ್ಲಿ ಕಟ್ಟರ್‌ ಪಂಥೀಯ ಧೋರಣೆ ಹೊಂದಿದ್ದಾರೆ.

    ಜಗತ್ತಿನಾದ್ಯಂತ ತಬ್ಲಿಘಿಯ 35-40 ಕೋಟಿ ಸದಸ್ಯರಿದ್ದಾರೆ ಎಂದು ಅಂದಾಜಿಸಲಾಗಿದೆ. ಯಾವುದೇ ರಾಜಕೀಯ ಚಟುವಟಿಕೆ ಹಾಗೂ ಚರ್ಚೆಗಳಿಗೆ ಬಾರದ ತಬ್ಲಿಘಿಗಳು ತಮ್ಮದೇನಿದ್ದರೂ ತಮ್ಮ ಮತ ಹಾಗೂ ನಂಬಿಕೆ ಮೇಲಿನ ಕೆಲಸವಷ್ಟೇ ಎನ್ನುತ್ತಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *