LATEST NEWS
ಬಿಜೆಪಿ ವರಿಷ್ಠರಿಗೆ ತಲೆನೋವಾದ ಸತ್ಯಜಿತ್ ಸುರತ್ಕಲ್ ಬಂಡಾಯ

ಬಿಜೆಪಿ ವರಿಷ್ಠರಿಗೆ ತಲೆನೋವಾದ ಸತ್ಯಜಿತ್ ಸುರತ್ಕಲ್ ಬಂಡಾಯ
ಮಂಗಳೂರು ಎಪ್ರಿಲ್ 22: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಭಿನ್ನಮತ ಮತ್ತೆ ಬುಗಿಲೆದ್ದಿದೆ. ಇತ್ತೀಚೆಗೆ ಎರಡನೇ ಪಟ್ಟಿಯಲ್ಲಿ ಮಂಗಳೂರು ಉತ್ತರ ಕ್ಷೇತ್ರಕ್ಕೆ ಬಿಜೆಪಿ ಯುವ ನಾಯಕ ಡಾ. ಭರತ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಮಾಜಿ ಶಾಸಕ ಕೃಷ್ಣ ಜೆ ಪಾಲೇಮಾರ್ ಮತ್ತು ಸತ್ಯಜಿತ್ ಸುರತ್ಕಲ್ ತಮ್ಮ ಅಸಮಧಾನವನ್ನು ಹೊರಹಾಕಿದ್ದರು.
ಈ ನಡುವೆ ಮಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಸತ್ಯಜಿತ್ ಸುರತ್ಕಲ್ ನನಗೆ ಟಿಕೆಟ್ ಕೈ ತಪ್ಪಲು ಸಂಸದ ನಳೀನ್ ಕುಮಾರ್ ಕಟೀಲ್ ಹಾಗೂ ಸಂಘದ ಪ್ರಮುಖರಾದ ಪಿ.ಎಸ್ ಪ್ರಕಾಶ್ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೆ ಮಂಗಳೂರಿನ ಹೊಸಬೆಟ್ಟು ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನಡೆದ ಸತ್ಯಜಿತ್ ಅಭಿಮಾನಿಗಳು ಸಭೆ ನಡೆಸಿದ್ದು ಸುಮಾರು 400 ಕಾರ್ಯಕರ್ತರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸತ್ಯಜಿತ್ ಸುರತ್ಕಲ್ ನಾಳೆ ಬೆಳಗ್ಗೆ 10 ಗಂಟೆಯವರೆಗೆ ಸಮಯ ನೀಡುತ್ತೇನೆ ತಪ್ಪು ತಿದ್ದಿಕೊಳ್ಳಲು ಇನ್ನೂ ಅವರಿಗೆ ಸಮಯಾವಕಾಶ ಇದೆ ಎಂದು ಹೇಳಿದರು. ಕಳೆದ 35 ವರ್ಷಗಳಿಂದ ಸಂಘಕ್ಕಾಗಿ ದುಡಿದಿದ್ದೇನೆ, ಕಳೆದ ಲೋಕಸಭಾ ಚುನಾವಣೆ ವೇಳೆ ಸಂಸದ ಕಟೀಲ್ ಪರ ಕಾರ್ಯನಿರ್ವಹಿಸಿದ್ದೆ, ಇದ್ದ ಸಮಸ್ಯೆಗಳನ್ನು ಪರಿಹರಿಸಿ ನಾನು ಸಂಸದರ ಪರ ಕೆಲಸ ಮಾಡಿದ್ದೆ ಎಂದು ಹೇಳಿದರು.
ನನ್ನನ್ನು ಕಾರ್ಯಕರ್ತರು ನನ್ನನ್ನ ಬೆಳೆಸಿದ್ದೇ ಹೊರತು ನಾಯಕರಲ್ಲ ಎಂದು ಹೇಳಿದ ಅವರು ಅಭಿಮಾನಿಗಳು ಪಕ್ಷೇತರನಾಗಿ ಸ್ಪರ್ಧಿಸಲು ಒತ್ತಾಯಿಸಿದ್ದಾರೆ, ಆದರೂ ನಾನು ನಾಳೆ ಬೆಳಗ್ಗೆ 10 ಗಂಟೆಯವರೆಗೆ ಪಕ್ಷಕ್ಕೆ ಸಮಯ ನೀಡುತ್ತಿದ್ದು, ಯಾವ ಕಾರಣಕ್ಕೆ ನನಗೆ ಟಿಕೆಟ್ ನಿರಾಕರಿಸಿದ್ದೀರಿ ಎಂಬುದಕ್ಕೆ ಸ್ಪಷ್ಟ ಮಾಹಿತಿ ಕೊಡಿ ಎಂದು ಆಗ್ರಹಿಸಿದರು. ಸರ್ವೇ ಆಧಾರದಲ್ಲಿ ಟಿಕೆಟ್ ನೀಡಲಾಗಿದೆ ಎನ್ನುವುದನ್ನು ನಾನು ಒಪ್ಪಲಾರೆ, ಕೇಂದ್ರ ನಾಯಕರ ತೀರ್ಮಾನ ಎಂಬುದನ್ನ ನಾನು ನಂಬಲು ಸಿದ್ದನಿಲ್ಲ ಎಂದು ಹೇಳಿದರು. ಈ ಹಿನ್ನಲೆಯಲ್ಲಿ ಟಿಕೆಟ್ ನಿರಾಕರಣೆ ಬಗ್ಗೆ ನಾಳೆ ಬೆಳಿಗ್ಗೆ 10 ಗಂಟೆಯೊಳಗೆ ಸ್ಪಷ್ಟ ಮಾಹಿತಿ ನೀಡದಿದ್ದರೆ ಮುಂದಿನ ನಿರ್ಧಾರ ನಾಳೆ ಹೇಳುತ್ತೇನೆ ಎಂದು ತಿಳಿಸಿದರು.
VIDEO