FILM
ಬಾಲಿವುಡ್ ಗೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್….!!

ಮುಂಬೈ : ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಸಿನೆಮಾ ರಂಗಕ್ಕೆ ಕಾಲಿಡುವ ಕುರಿತಂತೆ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಸಾರಾ ತೆಂಡೂಲ್ಕರ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದು, ಯಾವುದೇ ನಟಿಗೆ ಕಮ್ಮಿಯಿಲ್ಲ. ಬ್ಯೂಟಿ ಕ್ವೀನ್ ಸಾರಾಗೆ ಈಗಾಗಲೇ ಅಪಾರ ಅಭಿಮಾನಿಗಳ ಬಳಗವಿದೆ. ಇನ್ನು 2021ರಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಸಾರಾ ಕಾಲಿಟ್ಟಿದ್ದರು. ಬಾಲಿವುಡ್‌ನ ಬಿಗ್ ಪ್ರಾಜೆಕ್ಟ್ ಮೂಲಕ ಸಾರಾ ಲಾಂಚ್ ಆಗಲಿದ್ದಾರೆ ಎಂಬ ಮಾತುಗಳು ಬಿಟೌನ್‌ನಲ್ಲಿ ಕೇಳಿ ಬರುತ್ತಿದೆ.

ಈಗಾಗಲೇ ಸಾಕಷ್ಟು ಜನಪ್ರಿಯ ಬಟ್ಟೆ ಬ್ರ್ಯಾಂಡ್‌ಗಳಿಗೆ ಸಾರಾ ರಾಯಭಾರಿಯಾಗಿದ್ದಾರೆ. ಈ ಮೂಲಕ ಸಾರಾ ಸಿನಿಪ್ರಿಯರ ಗಮನ ಸೆಳೆದಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಡೋದಕ್ಕೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಜತೆಗೆ ನಟನೆಯ ತರಬೇತಿ ಕೂಡ ಪಡೆಯುತ್ತಿದ್ದಾರೆ. ಸಾರಾ ಪ್ರತಿ ಹೆಜ್ಜೆಯಲ್ಲೂ ಸಚಿನ್ ದಂಪತಿ ಬೆಂಬಲ ಇದ್ದೆ ಇರುತ್ತದೆ. ಹಾಗಾಗಿ ಸಾರಾ ಕನಸಿಗೆ ಬೆಂಬಲ ಸೂಚಿಸಿದ್ದಾರಂತೆ.