Connect with us

DAKSHINA KANNADA

ಕಾಂಗ್ರೇಸ್ ಪಕ್ಷಕ್ಕೆ ತನ್ನ ಮುಖಂಡನ ಮಗಳನ್ನೇ ರಕ್ಷಿಸಲು ಸಾಧ್ಯವಾಗಿಲ್ಲ ಇನ್ನು ರಾಜ್ಯದ ಸ್ಥಿತಿ ಏನು – ಮಾಜಿ ಶಾಸಕ ಸಂಜೀವ ಮಠಂದೂರು

ಪುತ್ತೂರು ಎಪ್ರಿಲ್ 19: ರಾಜ್ಯದಲ್ಲಿ ಕಳೆದ 11 ತಿಂಗಳಿನಿಂದ ರಾಜ್ಯದಲ್ಲಿ ಅಹಿತಕರ ಘಟನೆ ನಡೆಯುತ್ತಿದ್ದು, ಗೃಹಸಚಿವ ಪರಮೇಶ್ವರ್ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.


ಪುತ್ತೂರಿನಲ್ಲಿ ಮಾತನಾಡಿದ ಅವರು ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿಯ ಕೊಲೆ ರಾಜ್ಯದ ಜನರನ್ನು ಭಯದಲ್ಲಿ ಬದುಕುವಂತೆ ಮಾಡಿದೆ. ಹಾಡುಹಗಲೇ ಕಾಲೇಜು ಕ್ಯಾಂಪಸ್ ಒಳಗೆ ಮತಾಂಧ ವಿದ್ಯಾರ್ಥಿನಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಮುಸ್ಲಿಂ ಸಂಘಟನೆಗಳು ಇಂಥಹ ಮತಾಂಧರಿಗೆ ಕುಮ್ಮಕ್ಕು ನೀಡುತ್ತಿವೆ. ಇವುಗಳ ಕುಮ್ಮಕ್ಕಿನಿಂದ ಮತಾಂಧರು ಇಂಥಹ ಬೇರೆ ಬೇರೆ ಕೃತ್ಯಗಳನ್ನು ಮಾಡುತ್ತಿದ್ದಾರೆ. ಸಮಾಜಘಾತುಕರಿಗೆ ಕಾನೂನಿನ ಭಯ ಇಲ್ಲದ ಸ್ಥಿತಿಯಿದೆ ಎಂದರು.

ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿ ಜೈಲಿನಲ್ಲಿರುವವರನ್ನು ಸರಕಾರವೇ ಬಿಡಿಸಿ ಹೊರ ತರುತ್ತಿದೆ. ಸರಕಾರ ಮತ್ತು ಕಾಂಗ್ರೇಸ್ ತಮ್ಮ ಪರವಾಗಿದೆ ಎನ್ನುವ ಕಾರಣಕ್ಕೆ ಭಯವಿಲ್ಲದೆ ಈ ಕೃತ್ಯಗಳನ್ನು ಮಾಡುತ್ತಿದ್ದಾರೆ. ಇಷ್ಟೆಲ್ಲಾ ಘಟನೆಗಳು ನಡೆದರೂ ಗೃಹಸಚಿವರು ಕಣ್ಣುಮುಚ್ಚಿ ಕೂತಿದ್ದಾರೆ. ಅವರಿಗೆ ರಾಜ್ಯದಲ್ಲಿ ಇನ್ನಷ್ಟು ಕೊಲೆಗಳು ನಡೆಯಬೇಕು ಎನ್ನುವ ಆಸೆ ಇದ್ದಂತೆ ಕಾಣುತ್ತಿದೆ. ಪುತ್ತೂರಿನಲ್ಲಿ ಮನೆ ಮನೆ ಮತದಾನದ ಸಂದರ್ಭದಲ್ಲಿ ಮುಸ್ಲಿಂ ಮಹಿಳೆ ಅಂಗನವಾಡಿ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸುತ್ತಾರೆ. ವಿದ್ಯಾರ್ಥಿನಿ ಸಾವಿನ ನೈತಿಕ ಹೊಣೆ ಹೊತ್ತು ಇಡೀ ಸಚಿವ ಸಂಪುಟ ರಾಜೀನಾಮೆ ನೀಡಬೇಕು ಎಂದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *