LATEST NEWS
ಕಸಾಯಿಖಾನೆ ಅನುದಾನ ವಿಚಾರದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸದ ಬಿಜೆಪಿ ಶಾಸಕ ಸಂಜೀವ ಮಠಂದೂರು
ಕಸಾಯಿಖಾನೆ ಅನುದಾನ ವಿಚಾರದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸದ ಬಿಜೆಪಿ ಶಾಸಕ ಸಂಜೀವ ಮಠಂದೂರು
ಮಂಗಳೂರು ಅಕ್ಟೋಬರ್ 09: ವಿವಾದದ ಕೇಂದ್ರ ಬಿಂದುವಾಗಿರುವ ಕುದ್ರೋಳಿ ಕಸಾಯಿಖಾನೆ ಅನುದಾನ ವಿಚಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಜಿಲ್ಲಾಧ್ಯಕ್ಷ ಶಾಸಕ ಸಂಜೀವ ಮಠಂದೂರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಾಗದೇ ಎದ್ದು ಹೋದ ಘಟನೆ ನಡೆದಿದೆ.
ಕುದ್ರೋಳಿ ಕಸಾಯಿಖಾನೆ ಯನ್ನು ಅಭಿವೃದ್ಧಿಗೊಳಿಸುವ ಸಚಿವ ಖಾದರ್ ಅವರ ಹೇಳಿಕೆ ವಿಚಾರದಲ್ಲಿ ಇಂದು ಮಂಗಳೂರಿನ ಬಿಜೆಪಿ ಕಚೇರಿದಲ್ಲಿ ಮಾಧ್ಯಮಗೋಷ್ಠಿ ಕರೆಯಲಾಗಿತ್ತು. ನಗರದ ಸಮಗ್ರ ಅಭಿವೃದ್ಧಿ ಹಾಗು ಸ್ವಚ್ಛತೆಗೆ ನೀಡಿದ ಹಣವನ್ನು ಸಚಿವ ಖಾದರ್ ಈ ರೀತಿ ದುರುಪಯೋಗ ಪಡಿಸುವುದು ಸರಿಯಲ್ಲ ಎಂದು ಹೇಳಿದ ಅವರು ಸಚಿವ ಖಾದರ್ ಅಲ್ಪಸಂಖ್ಯಾತರನ್ನು ಓಲೈಸಲು ತಮ್ಮ ಅಧಿಕಾರ ವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಈ ಕಸಾಯಿಖಾನೆಯ ಅಭಿವೃದ್ದಿಯೋಜನೆ ಯನ್ನು ನಾವು ಜಾರಿ ಆಗಲು ಯಾವಕಾರಣಕ್ಕೂ ಬಿಡುವುದಿಲ್ಲ ಎಂದು ತಿಳಿಸಿದರು.
ಈ ನಡುವೆ ಶಾಸಕ ಸಂಜೀವ ಮಠಂದೂರು ಅವರಿಗೆ ಪತ್ರಕರ್ತರು ಮರು ಪ್ರಶ್ನೆ ಹಾಕಿದ್ದಾರೆ. ಕಸಾಯಿಖಾನೆ ಅಭಿವೃದ್ದಿ ನಗರದ ಸ್ವಚ್ಛತೆ ಬಗ್ಗೆ ಕಾಳಜಿಯಿಂದಾಗಿಯೇ ಅಲ್ಲವೇ ಎಂದು ಪತ್ರಕರ್ತರ ಪ್ರಶ್ನೆಗೆ ಶಾಸಕರು ಉತ್ತರಿಸಲಾಗದೇ ಚಡಪಡಿಸಿದ್ದಾರೆ. ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಕಮಿಟಿಯಲ್ಲಿ ಬಿಜೆಪಿ ಸದಸ್ಯರೂ ಕೂಡ ಇದ್ದು ಈ ಕಸಾಯಿಖಾನೆಯ ಅಭಿವೃದ್ಧಿ ಪ್ರಸ್ತಾವನೆಗೆ ಯಾಕೆ ವಿರೋಧ ವ್ಯಕ್ತಪಡಿಸಿಲ್ಲ ಎಂದು ಪತ್ರಕರ್ತರು ಶಾಸಕರಿಗೆ ಮರು ಪ್ರಶ್ನೆ ಹಾಕಿದ್ದಾರೆ.
ಈ ಸಂದರ್ಭ ದಲ್ಲಿ ತಮ್ಮತ್ತ ತೂರಿ ಬಂದ ಮತ್ತಷ್ಟು ಪ್ರಶ್ನೆಗಳಿಂದಾಗಿ ಕೆಲಹೊತ್ತು ಗೊಂದಲಕ್ಕೆಡಾದ ಶಾಸಕ ಸಂಜೀವ ಮಠಂದೂರು, ಯಾವುದೇ ಪ್ರಶ್ನೆಗೂ ಸಮರ್ಪಕವಾಗಿ ಉತ್ತರಿಸದೇ ಅರ್ಧದಲ್ಲೇ ಎದ್ದು ಹೋರ ನಡೆದಿದ್ದಾರೆ.