MANGALORE
ಉಳ್ಳಾಲದಲ್ಲಿ ಏರಿಕೆ ಹಾದಿಯಲ್ಲಿ ಕೊರೊನಾ ಸೊಂಕು, ನಗರಸಭಾ ವ್ಯಾಪ್ತಿಯಲ್ಲಿ ಸ್ಯಾನಿಟೈಸಿಂಗ್
ಮಂಗಳೂರ ಜೂನ್ 27: ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣಗಳು ಏರಿಕೆ ಹಿನ್ನಲೆ ಇಂದು ಕೊರೊನಾ ಹೆಚ್ಚಾಗಿ ಕಂಡು ಬಂದ ಪ್ರದೇಶ ಸೇರಿದತೆ ಉಳ್ಳಾಲ ನಗರಸಭಾ ವ್ಯಾಪ್ತಿಯ ಉಳ್ಳಾಲ ಪೇಟೆ, ತೊಕ್ಕೊಟ್ಟು ಪೇಟೆ ಸೇರಿದಂತೆ ಮುಖ್ಯ ರಸ್ತೆ ಸಂಪರ್ಕಿಸುವ ಸ್ಥಳದಲ್ಲಿ ಅಗ್ನಿಶಾಮಕ ವಾಹನದಲ್ಲಿ ಸ್ಯಾನಿಟೈಸ್ ಮಾಡುವ ಕಾರ್ಯ ಆರಂಭವಾಗಿದೆ.
ಶಾಸಕ ಯು.ಟಿ.ಖಾದರ್ ಉಳ್ಳಾಲ ಕೋಡಿಯಲ್ಲಿ ಸ್ಯಾನಿಟೈಸ್‍ಗೆ ಚಾಲನೆ ನೀಡಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಹೊರಗಡೆ ತೆರಳುವಾಗ ಮಾಸ್ಕ್ ಧರಿಸಬೇಕು. ಜನರೊಂದಿಗೆ,ಮಾತನಾಡುವಾಗ ಅಂತರ ಕಾಯ್ದುಕೊಳ್ಳಬೇಕು ಎಂದರು. ಉಳ್ಳಾಲದ ಅಜಾದ್ ನಗರ, ಕೋಡಿ, ಬಂಗೇರ ಲೇನ್, ಪೊಲೀಸ್ ಠಾಣೆ, ಸಹರಾ ಆಸ್ಪತ್ರೆ ವ್ಯಾಪ್ತಿಯಲ್ಲಿ ಸೋಂಕು ಪತ್ತೆಯಾಗಿದ್ದು ಈ ಪ್ರದೇಶದಲ್ಲಿ ರ್‍ಯಾಂಡಮ್ ಆಗಿ ಪರೀಕ್ಷೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಹಾಗೆಯೇ ಉಳ್ಳಾಲದ ಮೀನುಗಾರರು, ರಿಕ್ಷಾ ಚಾಲಕರು ಮತ್ತು ಬೀದಿ ಬದಿ ವ್ಯಾಪಾರಸ್ಥರ ತಪಾಸಣೆ ನಡೆಸಲು ಕೂಡಾ ತೀರ್ಮಾನಿಸಲಾಗಿದೆ.
ಸೋಂಕು ಹೆಚ್ಚುತ್ತಿರುವ ಕಾರಣದಿಂದಾಗಿ ಉಳ್ಳಾಲದ ಹಲವು ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಸ್ಥಗಿತ ಮಾಡುವಂತೆ ಧಾರ್ಮಿಕ ಕೇಂದ್ರಗಳ ಮುಖಂಡರ ಸಭೆ ನಡೆಸಿ ಖಾದರ್ ಅವರು ಸಲಹೆ ನೀಡಿದ್ದಾರೆ.
Facebook Comments
You may like
ತೈಲ ದರ ಹೆಚ್ಚಾದರೂ ಚಿಂತೆಯಿಲ್ಲ ಎನ್ನುವವರಿಗೆ ಲೀಟರಿಗೆ 1 ಸಾವಿರ ದರ ವಿಧಿಸಿ : ಯು.ಟಿ. ಖಾದರ್
ಮಹಾರಾಷ್ಟ್ರದಲ್ಲಿ ಕರೊನಾ ಹಾವಳಿ : ಪೊಲೀಸರಿಗೆ ವರ್ಕ್ಫ್ರಮ್ ಹೋಮ್!
ತಲಪಾಡಿ ದೇವಿಪುರ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಪಲ್ಟಿಯಾದ ಮರಳು ಸಾಗಿಸುತ್ತಿದ್ದ ಟಿಪ್ಪರ್
ಕೇರಳ ಮತ್ತು ಮುಂಬೈಯಿಂದ ಬರುವವರಿಗೆ ಆರ್.ಟಿ.ಪಿ.ಸಿ.ಆರ್ ಕಡ್ಡಾಯ : ಸಂಸದೆ ಶೋಭಾ
ಕೇರಳ ಗಡಿ ಭಾಗದಲ್ಲಿ ಮತ್ತೆ ಕೋವಿಡ್ ತಪಾಸಣೆ , ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಕರ್ನಾಟಕ ಪ್ರವೇಕ್ಕೆ ಅವಕಾಶ: ಕೇರಳಿಗರಿಂದ ಪ್ರತಿಭಟನೆ
ಅನುಮತಿ ಇಲ್ಲದಿದ್ದರೂ ಯೂನಿಟಿ ಮಾರ್ಚ್; ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸುಮೊಟೊ ದೂರು ದಾಖಲು
You must be logged in to post a comment Login