FILM
ಮುರಿದ ಹೃದಯಗಳು ಎಲ್ಲಿಗೆ ಹೋಗುತ್ತವೆ – ಸಾನಿಯಾ ಮಿರ್ಜಾ….!!

ನವದೆಹಲಿ ನವೆಂಬರ್ 08: ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಹಾಗೂ ಸಾನಿಯಾ ಮಿರ್ಜಾ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದ್ದು. ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ನಲ್ಲಿ “ಮುರಿದ ಹೃದಯಗಳು ಎಲ್ಲಿಗೆ ಹೋಗುತ್ತವೆ. ಅಲ್ಲಾನ ಹುಡುಕಲು ಹೋಗುತ್ತವೆ,” ಎಂದು ಬರೆದುಕೊಂಡಿದ್ದಾರೆ. ಇದರಿಂದ ಅವರ ಖಾಸಗಿ ಜೀವನದಲ್ಲಿ ಬಿರುಕು ಬಿಟ್ಟಿರುವುದು ಸ್ಪಷ್ಟವಾಗಿದೆ.
ಇಬ್ಬರ ನಡುವೆ ಕೆಲ ಸಮಯದಿಂದ ಎಲ್ಲವೂ ಸರಿಯಿಲ್ಲ. ಇಬ್ಬರೂ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾರೆ. ಮತ್ತು ಮಗ ಇಜಾನ್‌ನನ್ನು ಒಬ್ಬೊಬ್ಬರು ಒಂದಷ್ಟು ದಿನ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ 2010ರಲ್ಲಿ ಮದುವೆಯಾಗಿದ್ದರು. ಎರಡು ದೇಶಗಳ ನಡುವೆ ದ್ವೇಷಗಳಿದ್ದರೂ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ದೇಶಗಳ ಹಂಗು ಮೀರಿ ಇಬ್ಬರೂ ಮದುವೆಯಾಗಿದ್ದರು.

ಜಗತ್ತಿನಾದ್ಯಂತ ಭಾರೀ ಸದ್ದು ಮಾಡಿದ ಮದುವೆಯಿದು. ಜತೆಗೆ ಸ್ಟಾರ್ ಜೋಡಿ ಅತ್ಯಂತ ಕ್ಯೂಟ್ ಜೋಡಿ ಎಂದೂ ಕರೆಸಿಕೊಂಡಿದ್ದರು. ಪಾಕಿಸ್ತಾನದ ಮಾಧ್ಯಮಗಳ ವರದಿ ಪ್ರಕಾರ ಶೋಯೆಬ್ ಮಲಿಕ್ ಸಾನಿಯಾ ಮಿರ್ಜಾ ಅವರಿಗೆ ವಂಚಿಸಿದ್ದಾರೆ. ಅವರು ಇನ್ನೊಬ್ಬ ಯುವತಿಯೊಂದಿಗೆ ಸಂಬಂಧ ಹೊಂದಿದ್ದರು. ಇದು ತಿಳಿದ ನಂತರ ಸಾನಿಯಾ ಮತ್ತು ಶೋಯೆಬ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನಲಾಗಿದೆ. ಈ ಊಹಾಪೋಹಗಳ ಕುರಿತು ಇಬ್ಬರೂ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.