DAKSHINA KANNADA
ಹಿಂಜಾವೇ ಮುಖಂಡನ ವಿರುದ್ಧ ಮತ್ತೆ ಸಿಡಿದ ಸಂಪ್ಯ ಎಸೈ
ಹಿಂಜಾವೇ ಮುಖಂಡನ ವಿರುದ್ಧ ಮತ್ತೆ ಸಿಡಿದ ಸಂಪ್ಯ ಎಸೈ
ಪುತ್ತೂರು,ಜನವರಿ 6: ಪುತ್ತೂರಿನ ಹಿಂದೂ ಮುಖಂಡರೊಬ್ಬರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಮಾನಕಾರಿಯಾಗಿ ಬರೆದ ಪುತ್ತೂರಿನ ಸಂಪ್ಯ ಪೋಲೀಸ್ ಠಾಣೆಯ ಎಸೈ ಅಬ್ದುಲ್ ಖಾದರ್ ಮತ್ತೆ ಸುದ್ಧಿಯಲ್ಲಿದ್ದಾರೆ.
ಪುತ್ತೂರಿನ ಹಿಂದೂ ಜಾಗರಣ ವೇದಿಕೆಯ ಮುಖಂಡ ಅಜಿತ್ ರೈ ಹೊಸಮನೆಯವರಿಗೆ ಪೋಲೀಸ್ ಠಾಣೆಯ ಒಳಗೆ ಹಿಗ್ಗಾಮುಗ್ಗಾ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಂಪ್ಯ ಪೋಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದರು.
ಈ ಸಂದರ್ಭದಲ್ಲಿ ಮಹಿಳೆಯರ ಮುಂದೆಯೇ ಎಸೈ ಅಬ್ದುಲ್ ಖಾದರ್ ಅಸಹ್ಯಕರ ಪದಗಳನ್ನು ಪ್ರಯೋಗಿಸುವ ಮೂಲಕ ಪ್ರತಿಭಟನಾನಿರತರನ್ನು ಹೀಯಾಳಿಸಿದ್ದರು.
ಈ ಸಂಬಂಧ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಈಗಾಗಲೇ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಲಿಖಿತ ದೂರನ್ನೂ ನೀಡಿದ್ದಾರೆ.
ಈ ನಡುವೆ ಇದೀಗ ಮತ್ತೆ ಎಸೈ ಅಬ್ದುಲ್ ಖಾದರ್ ಹಿಂದೂ ಜಾಗರಣ ವೇದಿಕೆಯ ಮುಖಂಡ ಅಜಿತ್ ರೈ ಹೊಸಮನೆ ಮೇಲೆ ತನ್ನ ವೈಯುಕ್ತಿಕ ದ್ವೇಷವನ್ನು ಸಾಧಿಸಲು ಹೊರಟಿದ್ದಾರೆ.
ಪುತ್ತೂರಿನ ಬಿಗ್ ನ್ಯೂಸ್ ಬ್ರೇಕಿಂಗ್ ಎನ್ನುವ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಟ್ಸ್ ಅಪ್ ಗ್ರೂಪ್ ನಲ್ಲಿ ಬಾಯಿಗೆ ಬಂದ ಹಾಗೆ ಅಜಿತ್ ರೈ ಹೊಸಮನೆಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ಕೂಡಾ ಇದ್ದು, ಇದೀಗ ಖಾಕಿ ಬಟ್ಟೆ ಧರಿಸಿದ್ದೇನೆ ಎನ್ನುವುದನ್ನು ಮರೆತು ಈ ರೀತಿಯ ಕಮೆಂಟ್ ಮಾಡಿರುವುದು ಭಾರೀ ಚರ್ಚೆಗೂ ಗ್ರಾಸವಾಗಿದೆ.
ಸರಕಾರಿ ಅಧಿಕಾರಿಯಾಗಿ ಯಾವೊಬ್ಬ ವ್ಯಕ್ತಿಯ ವಿರುದ್ಧವೂ ದ್ವೇಷ ಸಾಧಿಸಲು ತನ್ನ ಅಧಿಕಾರವನ್ನು ಬಳಸಿಕೊಳ್ಳುವುದು ಕಾನೂನುಬಾಹಿರವಾಗಿದೆ ಎನ್ನುವ ಅಭಿಪ್ರಾಯಗಳೂ ಇದೀಗ ಕೇಳಿ ಬರುತ್ತಿದೆ.
ಒರ್ವ ಸರಕಾರಿ ಅದೂ ಅಲ್ಲದೆ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಸಾಮರಸ್ಯವನ್ನು ಕಾಯ್ದುಕೊಳ್ಳಬೇಕಾದ ಸಂಪ್ಯ ಎಸೈ ಒರ್ವ ಸಾಮಾನ್ಯನಂತೆ ದ್ವೇಷ ಸಾಧನೆಯ ಕಮೆಂಟ್ ಗಳನ್ನು ಹಾಕುವುದು ಎಷ್ಟು ಸರಿ ಎನ್ನುವುದನ್ನು ಜಿಲ್ಲೆಯ ಹಿರಿಯ ಪೋಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಬೇಕಿದೆ.
ರಾಜಕೀಯವೋ, ಅಥವಾ ದ್ವೇಷ ಸಾಧನೆಯನ್ನು ಮಾಡುವುದಿದ್ದರೆ ಸಂಪ್ಯ ಎಸೈ ತನ್ನ ಖಾಕಿ ಬಟ್ಟೆಯನ್ನು ಕಳಚಿ ರಾಜಕೀಯಕ್ಕೆ ಸೇರುವುದು ಒಳಿತು ಎನ್ನುವ ಬುದ್ಧಿ ಮಾತುಗಳೂ ಸಾಮಾಜಿಕ ಜಾಲತಾಣಗಳಲ್ಲಿ ರಾಕೆಟ್ ವೇಗದಲ್ಲಿ ಹರಿದಾಡುತ್ತಿದೆ.