LATEST NEWS
ಮೂಡಬಿದಿರೆಯ ಬಟರ್ ಪ್ಲೈ ಪಾರ್ಕ್ ಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಗೌರವ

ಮೂಡಬಿದಿರೆಯ ಬಟರ್ ಪ್ಲೈ ಪಾರ್ಕ್ ಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಗೌರವ
ಮಂಗಳೂರು ಜೂನ್ 24: ಮೂಡಬಿದಿರೆ ಸಮೀಪದ ಬೆಳುವಾಯಿಯಲ್ಲಿ ಸಮ್ಮಿಲನ್ ಶೆಟ್ಟಿ ಅವರ ಚಿಟ್ಟೆ ಪಾರ್ಕ್ ವರ್ಲ್ಡ್ ಆಫ್ ಬುಕ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿದೆ.
ಗ್ರಾಮೀಣ ಭಾಗದಲ್ಲಿ ಸ್ಥಾಪನೆಯಾಗಿರುವ ಚಿಟ್ಟೆಪಾರ್ಕ್ ಈಗ ಅಂತರಾಷ್ಟ್ರೀಯ ಮನ್ನಣೆ ಪಡೆದಿದೆ. ಬೆಳುವಾಯಿ ಗ್ರಾಮದಲ್ಲಿ ಸಮ್ಮಿಲನ್ ಶೆಟ್ಟಿ ನಿರ್ಮಿಸಿದ ರಾಜ್ಯದ ಮೊದಲ ಖಾಸಗಿ ಚಿಟ್ಟೆ ಪಾರ್ಕ್ ಸುಮಾರು 7 ಎಕರೆ ವಿಸ್ತೀರ್ಣ ಹೊಂದಿದೆ.

2013ರಲ್ಲಿ ಉದ್ಘಾಟನೆಗೊಂಡಿದ್ದು, ಸದ್ಯ ಆಸಕ್ತರು, ಪರಿಸರ ಪ್ರೇಮಿಗಳು, ವಿಧ್ಯಾರ್ಥಿಗಳಿಗೆ ನೆಚ್ಚಿನ ತಾಣವಾಗಿದೆ. ಚಿಟ್ಟೆಗಳ ಬಗ್ಗೆ ಸಂಶೋಧನೆ, ಹೆಚ್ಚಿನ ಅಧ್ಯಯಮ ಮಾಡಲು ಅವಕಾಶ ಇಲ್ಲಿನ ವಿಶೇಷ 5 ಅಪರೂಪದ ಚಿಟ್ಟೆ ಪ್ರಭೇಧಗಳು ಸೇರಿ ಒಟ್ಟು 148 ಪ್ರಬೇಧಗಳು ಈ ಪಾರ್ಕ್ ದಾಖಲಾಗಿದೆ.
ಚಿಟ್ಟೆಗಳ ಕುರಿತಾಗಿ ಸಂರಕ್ಷಣೆ ಮತ್ತು ಜಾಗೃತಿ ಕಾರ್ಯಕ್ರಮಕ್ಕಾಗಿ ಲಂಡನ್ ವರ್ಲ್ಡ್ ಬುಕ್ ಈ ಗೌರವ ನೀಡಿದೆ.