Connect with us

    LATEST NEWS

    ಕೆಮಿಕಲ್ ಲೇಪಿತ ಮೀನು ಮಾರುಕಟ್ಟೆಗೆ ವೈರಲ್ ಆದ ವಿಡಿಯೋ

    ಕೆಮಿಕಲ್ ಲೇಪಿತ ಮೀನು ಮಾರುಕಟ್ಟೆಗೆ ವೈರಲ್ ಆದ ವಿಡಿಯೋ

    ಮಂಗಳೂರು ಜೂನ್ 23: ತರಕಾರಿ ಹಣ್ಣ ಹಂಪಲುಗಳನ್ನು ಕೆಡದಂತೆ ಮಾಡಲು ಕೆಮಿಕಲ್ ಗಳನ್ನು ಬಳಸಲಾಗುತ್ತದೆ ಎಂಬ ಘಟನೆಗಳು ಈಗಾಗಲೇ ಬಯಲಾಗಿದೆ. ಆದರೆ ಈಗ ಮೀನುಗಳನ್ನು ಕೂಡ ಕೆಡದಂತೆ ಇಡಲು ಕೆಮಿಕಲ್ ಗಳನ್ನು ಬಳಸಲಾಗುತ್ತಿದೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ.

    ಹಣ್ಣುಗಳಿಗೆ ಕೆಮಿಕಲ್ ಹಾಕಿ ಹಾಳಾಗದಂತೆ ತಿಂಗಳುಗಟ್ಟಲೆ ಮಾರಾಟ ಮಾಡುವಂತೆ ಈಗ ಮೀನಿಗೂ ವಿಷಕಾರಿ ಅಮೋನಿಯಾ ಬೆರೆಸಿ ಹಾಳಾಗದಂತೆ ವಾರಗಟ್ಟಲೆ ಮಾರಾಟವಾಗುವಂತೆ ನೋಡಿಕೊಳ್ಳುವ “ದಂಧೆ” ಕರಾವಳಿಯ ಎಲ್ಲೆಡೆ ಆರಂಭವಾಗಿದೆ ಎಂದು ಆರೋಪಿಸಲಾಗಿದೆ. ವಾರಗಟ್ಟಲೆ ಐಸ್ ನಲ್ಲಿಇಟ್ಟ ಮೀನುಗಳನ್ನು ಗಿರಾಕಿಗಳಿಗೆ ಫ್ರೆಶ್ ಎಂದು ತೋರಿಸಿ ಮಾರಾಟ ಮಾಡಲಾಗುತ್ತದೆ ಎಂದು ವಿಡಿಯೋ ದಲ್ಲಿ ತೋರಿಸಲಾಗಿದೆ. ಕೆಮಿಕಲ್ ಲೇಪನದ ಕುರಿತು ಗ್ರಾಹಕರೊಬ್ಬರು ಮೀನು ಚಿಲ್ಲರೆ ಮಾರಾಟಗಾರನ ನಡುವೆ ನಡೆದ ವಾಗ್ವಾದ ಈ ವಿಡಿಯೋ ದಲ್ಲಿದೆ.

    ಅದರ ಪ್ರಕಾರ ಈ ಕೆಮಿಕಲ್ ನಾವು ಹಾಕುವುದಿಲ್ಲ ಬೇರೆ ಯಾರೋ ಹಾಕುತ್ತಾರೆ ಎಂದು ಮೀನು ಮಾರಾಟಗಾರ ಸಮಜಾಯಿಸಿ ನಿಡುತ್ತಾನೆ. ಆದರೆ ಕೆಮಿಕಲ್ ಹಾಕುವವರು ಯಾರು ಎಂಬುದನ್ನು ಮೀನು ಮಾರಾಟಗಾರ ಹೇಳಲು ಹಿಂದೇಟು ಹಾಕುವ ಪ್ರಸಂಗ ಈ ವಿಡಿಯೋ ದಲ್ಲಿದೆ.

    ಮೀನಿಗೆ ಅಮೋನಿಯ ಹಾಕುವುದರಿಂದ ಅದು ಬೇಗ ಹಾಳಾಗುವುದಿಲ್ಲ. ಮೀನು ಸ್ವಲ್ಪ ಹಳದಿ ಬಣ್ಣ ಅಥವಾ ಬಿಳಿಚಿದಂತೆ ಕಾಣುವುದು. ತಾಜಾ ಮೀನಿನಲ್ಲಿ ಕಣ್ಣು ಹಾಗೂ ಕಿವಿರಿನ ಬಳಿ ಸ್ವಲ್ಪ ರಕ್ತ ಇರುತ್ತದೆ.ಅಮೋನಿಯಾ ಹಾಕಿದ ಮೀನಿನಲ್ಲಿ ಇದು ಕಾಣುವುದಿಲ್ಲ ಹಾಗೂ ಈ ಭಾಗಗಳು ಬಿಳಿಯಾಗಿರುತ್ತವೆ ಅದರಲ್ಲೂ ಮುಖ್ಯವಾಗಿ ಅಮೋನಿಯ ಹಾಕಿದ ಮೀನಿಗೆ ನೊಣ ಕುಳಿತುಕೊಳ್ಳುವುದಿಲ್ಲ. ಆದರೆ ಇಂತಹ ಅಮೋನಿಯಾ ಬೆರೆಸಿ ಮಾರುವ ಮೀನಿನ ಸೇವನೆಯಿಂದ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಈ ಕುರಿತು ಆರೋಗ್ಯ ಇಲಾಖೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೂಡ ಕೇಳಿಬರುತ್ತಿದೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply