FILM
ಕೆಲಸ ಅಂದ್ರೇ ಇದೇ ನೋಡಿ – ರಕ್ತಸಿಕ್ತ ಕೈ ತೋರಿಸಿ ನಟಿ ಸಮಂತಾ….!!

ಹೈದರಾಬಾದ್ ಫೆಬ್ರವರಿ 28: ಸದಾ ಸುದ್ದಿಯಲ್ಲಿರುವ ನಟಿ ಸಮಂತಾ ಇದೀಗ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಒಂದು ಅವರ ಅಭಿಮಾನಿಗಳನ್ನು ಆತಂಕಕ್ಕೀಡುಮಾಡಿದೆ.
ನಟಿ ಸಮಂತಾ ತಮ್ಮ ಬೋಲ್ಡ್ ಲುಕ್‌ನಿಂದ ಅಷ್ಟೇ ಅಲ್ಲದೇ ತಮ್ಮ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಸಮಂತಾ ತಮ್ಮ ಕೈಗಳಿಗೆ ಆದ ಗಾಯದ ಪೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸಮಂತಾ ಅವರು ‘ಸಿಟಡೆಲ್: ಇಂಡಿಯಾ ವೆಬ್ ಸಿರೀಸ್’ ಚಿತ್ರೀಕರಣದಲ್ಲಿ ಗಾಯಗೊಂಡಿದ್ದಾರೆ. ಅವರ ಕೈಗಳಿಗೆ ತರುಚಿದಂತೆ ಗಾಯಗಳಾಗಿದ್ದು, ಅಲ್ಲಲ್ಲಿ ರಕ್ತಸಿಕ್ತ ಕಲೆಗಳು ಕಂಡು ಬಂದಿವೆ. ಈ ಚಿತ್ರವನ್ನು ಹಂಚಿಕೊಂಡು ಅವರು ‘ಕೆಲಸದ ನಂಬಿಕೆಗಳು ಇದೇ ನೋಡಿ’ ಎಂದು ಒಕ್ಕಣಿಕೆ ಬರೆದುಕೊಂಡಿದ್ದಾರೆ.

ಕಾಶ್ಮೀರದಲ್ಲಿ ಚಿತ್ರೀಕರಣದ ವೇಳೆ ನಡೆದ ಗಾಯಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಂಡಿರುವ ಸಮಂತಾ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.