Connect with us

FILM

ಹಾಟ್ ಪೋಟೋಗಳ ಮೂಲಕ ನೆಟ್ಟಿಗರ ನಿದ್ದೆಗೆಡಿಸಿದ ನಟಿ ಸಮಂತಾ

ಹೈದರಾಬಾದ್ : ತೆಲುಗು ಚಿತ್ರರಂಗದ ಫೇವರೆಟ್ ಜೋಡಿಯಾಗಿದ್ದ ನಾಗಚೈತನ್ಯ ಹಾಗೂ ಸಮಂತಾ ನಡುವಿನ ಬಿರುಕಿನಿಂದಾಗಿ ಸುದ್ದಿಯಲ್ಲಿರುವ ಸಮಂತಾ ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ.


ದಿ ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ಸಮಂತಾ ಇದೀಗ ಪೋಟೋಶೂಟ್ ಒಂದಕ್ಕೆ ಮತ್ತೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಪೋಟೋಶೂಟ್ ನ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜಾಲತಾಣದಲ್ಲಿ ಸದಾ ತಮ್ಮ ಮಾದಕ ಫೋಟೋಗಳನ್ನು ಹರಿಬಿಡುವ ಸಮಂತಾ, ಇನ್​ಸ್ಟಾಗ್ರಾಂನಲ್ಲಿ 15 ಮಿಲಿಯನ್​ಗೂ ಹೆಚ್ಚು ಫಾಲೋವರ್ಸ್​ ಹೊಂದಿದ್ದಾರೆ.


ಇದೀಗ ಲೂಯಿಸ್ ವಿಟಾನ್ ಕಂಪನಿಯ ಬ್ಯಾಗ್​ ಒಂದನ್ನು ಹಿಡಿದು ಸಮಂತಾ ಮಾದಕ ಫೋಸ್​ ನೀಡಿದ್ದಾರೆ. ಸಮಂತಾ ಕೇವಲ ಬ್ರಾನಲ್ಲಿ ಕಾಣಿಸಿಕೊಂಡಿರುವುದು ಹಲವರ ಹುಬ್ಬೇರಿಸಿದೆ. ಇನ್ನು ಕೆಲವರು ನಾಗಚೈತನ್ಯ ವೈಮನಸ್ಸಿಗೆ ಇದು ಕಾರಣವಾಗಿರಬಹುದೆಂದು ನೆಟ್ಟಿಗರು ಸಮಂತಾ ಕಾಲೆಳೆದಿದ್ದಾರೆ.


ಒಂದು ಮೂಲಗಳ ಪ್ರಕಾರ ಇನ್​ಸ್ಟಾಗ್ರಾಂನ ಪ್ರತಿ ಪೋಸ್ಟ್​ಗೆ 7 ರಿಂದ 13 ಲಕ್ಷವನ್ನು ಸಮಂತಾ ಚಾರ್ಜ್​ ಮಾಡುತ್ತಾರಂತೆ. ಪ್ರತಿ ಇನ್​ಸ್ಟಾಗ್ರಾಂ ಸ್ಟೋರಿಗೆ ಶೇ. 70 ರಷ್ಟು ಚಾರ್ಜ್​ ಮಾಡುತ್ತಾರಂತೆ.