Connect with us

    FILM

    ಬಿಗಡಾಯಿಸಿದ ಸಮಂತಾ ಆರೋಗ್ಯ – ಚಿಕಿತ್ಸೆಗಾಗಿ ದಕ್ಷಿಣ ಕೊರಿಯಾಗೆ ಪಯಣ

    ಹೈದರಾಬಾದ್ ನವೆಂಬರ್ 30: ಬಹುಭಾಷಾ ನಟಿ ಸಮಂತಾ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆ ಇದೀಗ ಚಿಕಿತ್ಸೆಗಾಗಿ ದಕ್ಷಿಣಕೊರಿಯಾಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದು ವರದಿಯಾಗಿದೆ.


    ತೆಲುಗು ಸಿನಿಮಾ ರಂಗದ ಖ್ಯಾತ ನಟಿ ಸಮಂತಾ ಆರೋಗ್ಯದ ಬಗ್ಗೆ ವದಂತಿಗಳು ಬರುತ್ತಲೇ ಇದ್ದು, ತಾವು ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಸಮಂತಾ ತಿಳಿಸಿದ್ದರು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅವರು ಮಯೋಸಿಟಿಸ್ ಕಾಯಿಲೆ ಕುರಿತಂತೆ ಬರೆದುಕೊಂಡರು. ಫೋಟೋ ಸಮೇತ ಹಾಕಿ, ಚಿಕಿತ್ಸೆ ಪಡೆಯುತ್ತಿರುವ ಕುರಿತು ಹೇಳಿಕೊಂಡರು.


    ಇದಾದ ನಂತರ ಅವರು ಯಶೋದಾ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡರು. ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ಮತ್ತೆ ಅವರ ಆರೋಗ್ಯದ ಬಗ್ಗೆಯೇ ಮತ್ತೊಂದು ಸುತ್ತಿನ ಚರ್ಚೆ ಶುರುವಾಯಿತು. ಅವರ ಮ್ಯಾನೇಜರ್ ಈ ಕುರಿತು ಮತ್ತೆ ಸ್ಪಷ್ಟಪಡಿಸಿ ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಿದರು. ಆದರೆ, ಸಿನಿಮಾ ರಿಲೀಸ್ ಸಂದರ್ಭದಲ್ಲಿ ಅವರು ಯಾವುದೇ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಳ್ಳಲಿಲ್ಲ. ಕ್ಯಾಮೆರಾ ಮುಂದೆಯೂ ಬರಲಿಲ್ಲ.


    ಮೊದಲು ಅವರು ಅಮೆರಿಕಾದಲ್ಲಿ ಚಿಕಿತ್ಸೆ ಪಡೆದರು ಎಂದು ಹೇಳಲಾಗಿತ್ತು. ಅಲ್ಲಿಂದ ಬಂದ ನಂತರ ಅವರು ಭಾರತದಲ್ಲೇ ಅದಕ್ಕೆ ಔಷಧಿ ಪಡೆದರು. ಇದೀಗ ದಕ್ಷಿಣ ಕೊರಿಯಾಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಯಾವುದೇ ಸ್ಪಷ್ಟನೆ ಬಂದಿಲ್ಲ.

    Share Information
    Advertisement
    Click to comment

    Leave a Reply

    Your email address will not be published. Required fields are marked *