DAKSHINA KANNADA
ಮುಡಿಪು: ಬೀಫ್ ಬಿರಿಯಾನಿ ಹೊಟೇಲ್ ನ ರೀಲ್ಸ್..!: ಪೊಲೀಸ್ ಜೊತೆ ಹಿಂಜಾವೇ ದಾಳಿ
ಮುಡಿಪು, ನವೆಂಬರ್ 30: ಮುಡಿಪು ಸಮೀಪದ ತಾಜ್ ಸೆಂಟರ್ ಎಂಬ ಹೋಟೆಲಿನಲ್ಲಿ ದನದ ಮಾಂಸದ ಬಿರಿಯಾನಿ ಇದೆ ಎಂದು ವೀಡಿಯೋ ಮಾಡಿ ಹರಿ ಬಿಟ್ಟು ಈಗ ಕ್ಯಾಂಟಿನ್ ಮಾಲಕ ಪೊಲೀಸ್ ಬಲೆಗೆ ಬಿದ್ದಿದ್ದಾರೆ.
ವ್ಯಾಪಾರ ಮಾಡುತಿದ್ದ ಹೋಟೆಲಿಗೆ ಹಿಂದು ಜಾಗರಣ ವೇದಿಕೆ ಮುಡಿಪು ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಪೋಲೀಸರ ಜೊತೆಗೆ ಹಿಂಜಾವೇ ಕಾರ್ಯಕರ್ತರು ದಾಳಿ ಮಾಡಿ ದನದ ಮಾಂಸದ ಬಿರಿಯಾನಿ ಮತ್ತು ತಯಾರಿ ಮಾಡಿಟ್ಟಿದ್ದ ಮಾಂಸವನ್ನು ಪರಿಶೀಲಿಸಿದ್ದಾರೆ. ಹೋಟೆಲ್ ಮಾಲಕ ಹುಸೇನ್ ಎಂಬವರನ್ನು ಕೊಣಾಜೆ ಪೊಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.
You must be logged in to post a comment Login